ಉಳ್ಳಾಲ: ಹೆಲ್ಪ್ ಇಂಡಿಯಾ ಸಂಘಟನೆ ಪ್ರತಿವರ್ಷ ಆಶ್ರಮದಲ್ಲಿ ಹಬ್ಬಾಚರಣೆ ಜತೆ ಅಗತ್ಯ ಪರಿಕರಗಳನ್ನು ವಿತರಿಸುವ ಮೂಲಕ ಸೇವಾ ಮನೋಭಾವ ತೋರಿಸುತ್ತಿದೆ. ಆಶ್ರಮದಲ್ಲಿ ಕುಟುಂಬದಂತೆ ಜೀವನ ಸಾಗಿಸುವ ಮೂಲಕ ನೆಮ್ಮದಿ ಕಂಡುಕೊಳ್ಳಲು ಸಾಧ್ಯವಾಗಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಶ್ಲಾಘಿಸಿದರು.
ಹೆಲ್ಪ್ ಇಂಡಿಯಾ ಫೌಂಡೇಶನ್ ವತಿಯಿಂದ ಸೋಮೇಶ್ವರದ ಪಶ್ಚಿಮ ರಿಹಾಬಿಲಿಟಿ ಸೆಂಟರ್ ಆಶ್ರಮವಾಸಿಗಳಿಗೆ ಗಾಲಿಕುರ್ಚಿ ಉಚಿತ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಶ್ಚಿಮ್ ರಿಹಾಬಿಲಿಟಿ ಸೆಂಟರ್ ಸ್ಥಾಪಕ ರೋಹಿತ್ ಸಾಂಕ್ತೂಸ್ ಮಾತನಾಡಿ, ಹೆಲ್ಪ್ ಇಂಡಿಯಾ ಫೌಂಡೇಶನ್ ಸೆಂಟರ್ ಬಗ್ಗೆ ನಿರಂತರ ಕಾಳಜಿ ವಹಿಸಿ ನಿರಂತರ ಸೇವೆ ನೀಡುತ್ತಾ ಬಂದಿದೆ ಎಂದರು.
ಆಶ್ರಮವಾಸಿ ಸರೋಜ ಕಾರ್ಯಕ್ರಮ ಉದ್ಘಾಟಿಸಿದರು. ಹೆಲ್ಪ್ ಇಂಡಿಯಾ ಫೌಂಡೇಶನ್ ಸ್ಥಾಪಕಾಧ್ಯಕ್ಷ ರಾಝಿಕ್ ಉಳ್ಳಾಲ್, ಗುತ್ತಿಗೆದಾರ ರಶೀದ್ ಉಳ್ಳಾಲ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್, ಸದಸ್ಯ ಇಬ್ರಾಹಿಂ ಖಲೀಲ್, ಡಾ.ಯು.ಪಿ.ಸುಲೈಮಾನ್ ಶೇಖ್, ಸಂಶುದ್ದೀನ್, ರಕ್ಷಿತ್ ಪೂಜಾರಿ ಉಪಸ್ಥಿತರಿದ್ದರು. ಫಾರೂಕ್ ವಂದಿಸಿ, ಝಾಕೀರ್ ಇಖ್ಲಾಸ್ ನಿರೂಪಿಸಿದರು.
ಮನುಷ್ಯನ ಹುಟ್ಟು ಅನಿರೀಕ್ಷಿತವಾದರೆ ಸಾವು ಖಚಿತ. ಹುಟ್ಟು, ಸಾವಿನ ನಡುವಿನ ಸಣ್ಣ ಜೀವನದಲ್ಲಿ ನೊಂದವರು, ಸಮಾಜಕ್ಕೆ ಏನಾದರೂ ಕೊಡುಗೆ ನೀಡುವುದು, ನೋವಿನಲ್ಲಿರುವವರಿಗೆ ಸಂತೋಷ ನೀಡುವುದು ಮಾನವ ಧರ್ಮ. ರಾಝಿಕ್ ಉಳ್ಳಾಲ್, ಸ್ಥಾಪಕಾಧ್ಯಕ್ಷ, ಹೆಲ್ಪ್ ಇಂಡಿಯಾ ಫೌಂಡೇಶನ್