ಜಿಲ್ಲೆ

ಎಸ್ಸೆಸ್ಸೆಎಲ್ಸಿ ನಂತರ ಮುಂದೇನು?

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಇಲ್ಲಿನ ಗಾಂಧಿನಗರ ಶ್ರೀರಾಮಕೃಷ್ಣ ವಿವೇಕಾನಂದ ಸೆಂಟರ್‌ನಲ್ಲಿ ಅಸರೆ ಟ್ರಸ್ಟ್ , ಸಮರ್ಪಣ ಹಾಗೂ ಶ್ರೀರಾಮಕೃಷ್ಣ ವಿವೇಕಾನಂದ ಸೆಂಟರ್ ಸಹಯೋಗದೊಂದಿಗೆ ಎಸ್ಸೆಸ್ಸೆಎಲ್ಸಿ ನಂತರ ಮುಂದೇನು ? ಎಂಬ ತರಬೇತಿ ಮತ್ತು ಮಾರ್ಗದರ್ಶನ ಶಿಬಿರವನ್ನು ಬೆಳಗ್ಗೆ 9 ರಿಂದ 1 ರವರೆಗೆ ಏ.12 ರಂದು (ಶನಿವಾರ ) ಹಮ್ಮಿಕೊಳ್ಳಲಾಗಿದೆ.

ಬಿಐಟಿಎಂ ನಿರ್ದೇಶಕ ವೈ.ಜೆ.ಪೃಥ್ವಿರಾಜ್ ಭೂಪಾಲ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬ್ಯಾಂಕಿಂಗ್ ಮತ್ತು ವಾಣಿಜ್ಯ ಕ್ಷೇತ್ರ ವಿಷಯ ದ ಕುರಿತು ರವಿ ಕೋಚಿಂಗ್ ಸೆಂಟರ್ ಸಲಹೆಗಾರ ರವೀಂದ್ರ ಕುಮಾರ, ಇಂಜನಿಯರಿಂಗ್ ಕ್ಷೇತ್ರದಲ್ಲಿ ಹೊಸ ಹೊಸ ಅವಿಷ್ಕಾರಗಳು ಕುರಿತು ಪ್ರೊ.ಡಾ.ಕೆ.ಎಂ.ಸದ್ಯೋಜಾ, ವೈದ್ಯರು ನೀವಾಗಬೇಕಾ ವಿಷಯದ ಕುರಿತು ಪ್ರೊ.ಡಾ.ಎಸ್.ಕೃಷ್ಣ , ಐಎಎಸ್ ಹಾಗೂ ಐಪಿಎಸ್ ತಪ್ಪಿಲ್ಲ ಕನಸು ಕಾಣುವುದಿಲ್ಲ ಎಂಬ ವಿಷಯದ ಕುರಿತು ನಿ.ಬ್ಯಾಂಕ್ ಅಧಿಕಾರಿ ಗೌರಿ ಪ್ರಸಾದ್ ಅವರು ವಿವರಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಿದ್ದಾರೆ.

====