pardಹನಗಂಡಿ ಗ್ರಾಮದ ದೇಸಾಯಿಯವರ ವಾಡೆಯಲ್ಲಿ ಹಮ್ಮಿಕೊಂಡಿದ್ದ ಪುಸ್ತಕಾವಲೋಕನ-43 ಕಾರ್ಯಕ್ರಮದಲ್ಲಿ ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಹಣಕಾಸು ನಿಯಂತ್ರಣಾಧಿಕಾರಿ, ಸಾಹಿತಿ ಮಲ್ಲಿಕಾರ್ಜುನ ಶೆಲ್ಲಿಕೇರಿಯವರ ‘ಹವೇಲಿ ದೊರೆಸಾನಿ’ ಕೃತಿಯನ್ನು ಗುಳೆದಗುಡ್ಡದ ಕನ್ನಡ ಸಹಾಯಕ ಪ್ರಾಧ್ಯಾಪಕ ಪ್ರೊ. ಚಂದ್ರಶೇಖರ ಹೆಗಡೆ ಅವಲೋಕಿಸಿದರು. ನಿಲೇಶ ದೇಸಾಯಿ, ಪ್ರಸನ್ನಕುಮಾರ ದೇಸಾಯಿ, ಮ.ಕೃ. ಮೇತಾಡಿ, ಶಿವಾನಂದ ಶೆಲ್ಲಿಕೇರಿ ಇದ್ದರು. 
ಜಿಲ್ಲೆ

ಒಳಿತು ಕೆಡಕುಗಳ ಸಂಘರ್ಷದಲ್ಲಿ ಗೆದ್ದದ್ದು ಒಳಿತೆ

ರಬಕವಿ-ಬನಹಟ್ಟಿ : ಕಥೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿಯವರ ಹವೇಲಿ ದೊರೆಸಾನಿ ಕಥಾ ಸಂಕಲನದಲ್ಲಿ ಎಂಟು ಕಥೆಗಳು ಭೂತ, ವರ್ತಮಾನದ ಅನೇಕ ಸಂಗತಿಗಳನ್ನು ಹಾಗೂ ಭವಿಷ್ಯತ್ಕಾಲದ ಮುನ್ಸೂಚನೆಗಳನ್ನು ಕಾಣುತ್ತೇವೆ ಎಂದು ಗುಳೇದಗುಡ್ಡದ ಕನ್ನಡ ಸಹಾಯಕ ಪ್ರಾಧ್ಯಾಪಕ ಪ್ರೊ. ಚಂದ್ರಶೇಖರ ಹೆಗಡೆ ಹೇಳಿದರು.

ತಾಲೂಕಿನ ಹನಗಂಡಿ ಗ್ರಾಮದಲ್ಲಿ ಜಿಲ್ಲಾ ಕಸಾಪ, ತಾಲೂಕು ಘಟಕ ರಬಕವಿ-ಬನಹಟ್ಟಿ, ವಲಯಗಳು ತೇರದಾಳ, ಮಹಾಲಿಂಗಪುರದ ಸಂಯುಕ್ತಾಶ್ರಯದಲ್ಲಿ ಗ್ರಾಮದ ದೇಸಾಯಿಯವರ ವಾಡೆಯಲ್ಲಿ ಹಮ್ಮಿಕೊಂಡಿದ್ದ ಪುಸ್ತಕಾವಲೋಕನ-43 ಕಾರ್ಯಕ್ರಮದಲ್ಲಿ ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಹಣಕಾಸು ನಿಯಂತ್ರಣಾಧಿಕಾರಿ, ಸಾಹಿತಿ ಮಲ್ಲಿಕಾರ್ಜುನ ಶೆಲ್ಲಿಕೇರಿಯವರ ‘ಹವೇಲಿ ದೊರೆಸಾನಿ’ ಕೃತಿ ಅವಲೋಕಿಸಿ ಅವರು ಮಾತನಾಡಿದರು.

ಒಳಿತು ಕೆಡಕುಗಳ ಸಂಘರ್ಷದಲ್ಲಿ ಗೆದ್ದದ್ದು ಒಳಿತೆ. ಮಾನವೀಯ ಮೌಲ್ಯಗಳು, ಒಳ್ಳೆಯ ಚಿಂತನೆಗಳ ಕಥೆಗಳು ಓದುಗರಿಗೆ ತುಂಬಾ ಹಿಡಿಸುತ್ತವೆ. ಜೀವನದಲ್ಲಿ ಕೊನೆಗೆ ಪ್ರೀತಿ, ಒಳಿತು ಮತ್ತು ಸಂಸ್ಕಾರವೇ ಗೆಲ್ಲುತ್ತವೆ ಎಂಬ ಸಂದೇಶ ಸಾರುವ ಕಥೆಗಳು ಸೊಗಸಾಗಿ ಮೂಡಿಬಂದಿವೆ ಎಂದರು.

ಹಿರಿಯ ಸಾಹಿತಿ ಸಿದ್ಧರಾಜ ಪೂಜಾರಿ, ಕಸಾಪ ಜಿಲ್ಲಾ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ತಾಲೂಕು ಕಸಾಪ ಅಧ್ಯಕ್ಷ ಮ.ಕೃ. ಮೇಗಾಡಿ ಮಾತನಾಡಿದರು.

ಹನಗಂಡಿ ಗ್ರಾಮದ ಮುಖಂಡರಾದ ಪ್ರಸನ್ನಕುಮಾರ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಯುವಮುಖಂಡರಾದ ನೀಲೇಶ ದೇಸಾಯಿ ದಂಪತಿ ಸನ್ಮಾನಿಸಲಾಯಿತು. ಶಿವಾನಂದ ದಾಶಾಳ, ಎಂ.ಎಸ್. ಬಾದಾಮಿ, ಮಲ್ಲೇಶಪ್ಪ ಕುಚನೂರ, ಎಸ್.ಆರ್. ರಾವಳ, ಮೃತ್ಯುಂಜಯ ರಾಮದುರ್ಗ, ಎ.ಜಿ. ಮಹಾಲಿಂಗಪುರ, ಮಹಾದೇವ ಕವಿಶೆಟ್ಟಿ ಸಂವಾದದಲ್ಲಿ ಭಾಗವಹಿಸಿದ್ದರು.

ಜಿ.ಎಸ್. ವಡಗಾಂವಿ, ಬಿ.ಆರ್. ಪೊಲೀಸ್‌ಪಾಟೀಲ, ಮಲ್ಲಿಕಾರ್ಜುನ ಜವಳಗಿ, ಕಸಾಪ ತಾಲೂಕು ಕೋಶಾಧ್ಯಕ್ಷ ಡಿ.ಬಿ. ಜಾಯಗೊಂಡ, ಶಿವಾನಂದ ಬಾಗಲಕೋಟಮಠ, ವಿನೋದ ಸಾಹಿತಿ ಯಶವಂತ ವಾಜಂತ್ರಿ, ಬಸಯ್ಯ ವಸ್ತ್ರದ, ಗೌರಿ ಮಿಳ್ಳಿ, ಸುವರ್ಣಾ ಕೊಪ್ಪದ, ಭಾರತಿ ಆಸಂಗಿ, ಬಿ.ಎಸ್. ಕೊರಡೂರ, ಬಿ.ಎಂ. ಮಟ್ಟಿಕಲ್ಲಿ, ಕಲ್ಲೇಶ ಕುಂಬಾರ, ಮಹಾಶಾಂತ ಶೆಟ್ಟಿ, ಪ್ರಭು ಜೈನರ್, ಕೆ.ಎಸ್. ರಂಗಸ್ವಾಮಿ, ಎ.ಎಸ್. ನಾರವ್ವಗೋಳ, ಎಸ್.ಎಸ್. ಕಮತಗಿ ಇದ್ದರು.

ದಾನಪ್ಪ ಆಸಂಗಿ ಪ್ರಾರ್ಥಿಸಿದರು. ತೇರದಾಳ ವಲಯಾಧ್ಯಕ್ಷ ಗಂಗಾಧರ ಮೋಪಗಾರ ಸ್ವಾಗತಿಸಿದರು. ಡಾ. ಚಂದ್ರಕಾಂತ ಹೊಸೂರ ನಿರೂಪಿಸಿದರು. ಈರಣ್ಣ ಗಣಮುಖಿ ವಂದಿಸಿದರು. ಕಲಾವಿದರು, ಗ್ರಾಮಸ್ಥರು, ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.