ಜಿಲ್ಲೆ

ಕಾಲೇಜುಗಳ ಪುನರಾರಂಭ ಯಾವಾಗ?: ವಿದ್ಯಾರ್ಥಿಗಳ ಗೊಂದಲಕ್ಕೆ ಸಲಹಾ ಸಮಿತಿ ಅಧ್ಯಕ್ಷರ ಪರಿಹಾರ

ಮೈಸೂರು: ಕರೊನಾ ವೈರಸ್​ ಲಾಕ್​ಡೌನ್​ನಿಂದಾಗಿ ಶೈಕ್ಷಣಿಕ ಚಟುವಟಿಕೆಗಳು ಕಳೆದ ಎರಡು ತಿಂಗಳಿಂದ ಸ್ತಬ್ಧವಾಗಿದೆ. ಮೇ ತಿಂಗಳ ಬೇಸಿಗೆ ರಜೆ ಕಳೆದು ಜೂನ್​ ತಿಂಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಶೈಕ್ಷಣಿಕ ಕಾರ್ಯಗಳು ಸಹ ಶುರುವಾಗಬೇಕಿತ್ತು. ಆದರೆ, ಇದಕ್ಕೆಲ್ಲಾ ಕರೊನಾ ಬ್ರೇಕ್​ ಹಾಕಿದ್ದು, ಇದೀಗ ಎಲ್ಲರು ಕೇಳುತ್ತಿರುವುದೊಂದೇ ಪ್ರಶ್ನೆ ಶಾಲಾ-ಕಾಲೇಜು ಪುನರಾರಂಭ ಯಾವಾಗ?.

ಈಗಾಗಲೇ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಸಚಿವ ಎಸ್​.ಸುರೇಶ್​ ಕುಮಾರ್​ ಅವರು ಪೋಷಕರ ಅಭಿಪ್ರಾಯ ಪಡದೇ ಶಾಲೆಗಳನ್ನು ಆರಂಭ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಪೋಷಕರ ಅಭಿಪ್ರಾಯ ಪಡೆಯಲು 10,11 ಮತ್ತು 12 ತಾರೀಖು ಸಭೆ ನಿಗದಿಯಾಗಿದೆ. ಯಾವುದೇ ಕಾರಣಕ್ಕೂ ತರಾತುರಿಯಲ್ಲಿ ಶಾಲೆಗಳನ್ನು ಆರಂಭಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನು ಕಾಲೇಜುಗಳ ವಿಚಾರಕ್ಕೆ ಬಂದರೆ ಡಿಗ್ರಿ ಮತ್ತು ಮಾಸ್ಟರ್​ ಡಿಗ್ರಿ ಕತೆಯೇನು ಎಂಬ ಪ್ರಶ್ನೆ ಉದ್ಭವವಾಗಿದೆ. ಈಗಾಗಲೇ ಕೆಲವೇ ದಿನಗಳಲ್ಲಿ ಕಾಲೇಜುಗಳು ಶುರುವಾಗುತ್ತೇ ಹಾಗೂ ಈಗಾಗಲೇ ಆರಂಭವಾಗಿದೆ ಎಂಬ ಊಹಾಪೋಹಗಳು ಸಹ ಹರಿದಾಡುತ್ತಿದ್ದು, ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಿದೆ. ಇದನ್ನೂ ಓದಿ: PHOTO GALLERY| ಬರ್ತಡೇ ಗರ್ಲ್​ ಭಾವನಾ ರಾವ್​ ಹಾಟ್​ ಫೋಟೋಗಳು!​

ಇದಕ್ಕೆಲ್ಲ ತೆರೆ ಎಳೆಯಲು ದಿಗ್ವಿಜಯ ನ್ಯೂಸ್ ಉನ್ನತ ಶಿಕ್ಷಣ​ ಸಲಹಾ ಸಮಿತಿಯನ್ನು ಸಂಪರ್ಕಿಸಿದೆ. ಸಮಿತಿಯ ಪ್ರಕಾರ ಫಸ್ಟ್ ಇಯರ್, ಸೆಕೆಂಡ್ ಇಯರ್​ ವಿದ್ಯಾರ್ಥಿಗಳಿಗೆ ತರಗತಿಗಳಿಂದ ವಿನಾಯಿತಿ ನೀಡಲಾಗಿದ್ದು,​ ಫೈನಲ್ ಇಯರ್ ವಿದ್ಯಾರ್ಥಿಗಳಿಗೆ ಮಾತ್ರ ತರಗತಿಗಳು ನಡೆಸಲು ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.

ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ ತಡವಾಗಿ ಕಾಲೇಜು ತರಗತಿಗಳ ಆರಂಭ ಅನಿವಾರ್ಯವಾಗಿದೆ. ರಜೆಗಳನ್ನು ಮೊಟಕು ಮಾಡುವುದು, ಹೆಚ್ಚಿನ ತರಗತಿಗಳನ್ನು ತೆಗೆದುಕೊಳ್ಳುವ ಮೂಲಕ ಪಠ್ಯಕ್ರಮ ಸಮತೋಲನಕ್ಕೆ ಚಿಂತನೆ ನಡೆಸಲಾಗಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನ ವೇಳಾಪಟ್ಟಿ ಬದಲಾವಣೆಗೂ ಶಿಫಾರಸು ಮಾಡಲಾಗಿದೆ. ಭವಿಷ್ಯದಲ್ಲಿ ಆನ್‌ಲೈನ್ ಶಿಕ್ಷಣಕ್ಕೆ ಆದ್ಯತೆ ನೀಡಲು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಹೇಮಂತ್ ಕುಮಾರ್ ನೇತೃತ್ವದ ಸಲಹಾ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ. (ದಿಗ್ವಿಜಯ ನ್ಯೂಸ್​)