ವಿಜಯಪುರ: ಬೆಲೆ ಏರಿಕೆಯಿಂದಾಗಿ ದೇಶದ ಜನ ತತ್ತರಿಸಿದ್ದಾರೆ, ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ರೈತರು ನಷ್ಟದಲ್ಲಿದ್ದಾರೆ, ಪ್ರಗತಿ ಎಂಬ ಪದವೇ ಅರ್ಥ ಕಳೆದುಕೊಂಡಿರುವಾಗ ಬಿಜೆಪಿಯ ವಿಕಸಿತ ಭಾರತ ಎಂಬ ಪದಕ್ಕೆ ಅರ್ಥವೇನಾದರೂ ಇದೆಯಾ? ಎಂದು ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಬಿಜೆಪಿ ವಿರುದ್ಧ ಹರಿಹಾಯ್ದರು.
ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ಮಾಡಿದ ಸಾಧನೆ ಏನು? ಕೈಗೊಂಡ ಅಭಿವೃದ್ಧಿ ಎಂಥದ್ದು? ಎಂಬುದನ್ನು ಜನರ ಮುಂದಿಟ್ಟು ಮತ ಕೇಳುವ ಬದಲು ಕೇವಲ ಧರ್ಮ& ದೇವರು ಪದ ಬಳಸಿ ಮತ ಕೇಳುವ ದು@ಸ್ಥಿತಿಗೆ ಬಿಜೆಪಿ ಬಂದಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಕಿಡಿಕಾರಿದರು.
ಬಿಜೆಪಿ "ದಂಧಾ ಲೇವ್ ಚಂದಾ ದೇವ್' ಎಂಬ ನೀತಿ ಮಾಡಿ ಚುನಾವಣೆ ಬಾಂಡ್ ಹೆಸರಲ್ಲಿ ಹಣ ಸಂಗ್ರಹಿಸುತ್ತಿದೆ. ಪಾರದರ್ಶಕತೆ ತರುವ ಬಗ್ಗೆ ಇದೀಗ ಮಾತನಾಡುತ್ತಿರುವ ಬಿಜೆಪಿ ಗೌಪ್ಯತೆ ಕಾಪಾಡುವ ಬಗ್ಗೆ ಮೊದಲೇ ನೀತಿ ರೂಪಿಸಿತ್ತು. ಸುಪ್ರೀಂ ಕೋರ್ಟ್ ಚಾಟಿ ಬೀಸಿದಾಗಲೇ ಮಾಹಿತಿ ನೀಡಬೇಕಾಯಿತು ಎಂದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯೆ ಮಹಾದೇವಿ ಗೋಕಾಕ, ಸುಭಾಷ ಕಾಲೇಬಾಗ, ಸತೀಶ ಅಡವಿ, ವಸಂತ ಹೊನಮೊಡೆ, ಬೀರಪ್ಪ ಜುಮನಾಳ ಮತ್ತಿತರರಿದ್ದರು.