ರಾಯಚೂರು: ಜಿಲ್ಲೆಯಲ್ಲಿ ಅತಿ ಹೆಚ್ಚಿನ ನೀರಾವರಿ ಪ್ರದೇಶ ಹೊಂದಿರುವ ಸಿಂಧನೂರು ತಾಲೂಕಿನ ಬಯಲು ಪ್ರದೇಶದ ರೈತರ ಆರು ವರ್ಷಗಳ ತಿಮ್ಮಾಪುರ ಏತ ನೀರಾವರಿಯ ಕನಸು ಈಗ ಸಾಕಾರಗೊಂಡಿದೆ. ಇದರಿಂದಾಗಿ ಸಿಂಧನೂರು ತಾಲೂಕಿನ ಶೇ.90ರಷ್ಟು ಭೂಮಿ ನೀರಾವರಿಗೆ ಒಳಪಟ್ಟಂತಾಗಲಿದೆ.
ಸಿಂಧನೂರು ತಾಲೂಕಿನ ಕೆಲವು ಹಳ್ಳಿಗಳ ರೈತರು ತುಂಗಭದ್ರಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿದ್ದರೂ ನೀರಿನ ಸಮಸ್ಯೆ ಎದುರಿಸುತ್ತಿದ್ದರು. ಹೀಗಾಗಿ 2018ರ ೆ.18ರಂದು ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಿದ್ದರು.
90.60 ಕೋಟಿ ರೂ. ವೆಚ್ಚದಲ್ಲಿ 160 ಎಚ್‌ಪಿ ಸಾಮರ್ಥ್ಯದ ನಾಲ್ಕು ಮೋಟಾರ್ ಅಳವಡಿಸಿ ತುಂಗಭದ್ರಾ ನದಿಯಿಂದ ನೀರೆತ್ತಿ ತುರಕಟ್ಟಿ ಗ್ರಾಮದ ಹತ್ತಿರದ ತುಂಗಭದ್ರಾ ಎಡದಂಡೆ ವಿತರಣಾ ಕಾಲುವೆಗೆ ನೀರು ಹರಿಸುವುದು ಯೋಜನೆಯ ಮೂಲ ಉದ್ಧೇಶವಾಗಿದೆ.
ನದಿಯಿಂದ 17.10 ಕಿ.ಮೀ. ಅಂತರದಲ್ಲಿರುವ ತುರಕಟ್ಟಿ ಗ್ರಾಮದ ಹತ್ತಿರದ ತುಂಗಭದ್ರಾ ಎಡದಂಡೆ ವಿತರಣಾ ಕಾಲುವೆಗೆ ನೀರು ನೀರು ಹರಿಸುವ ಮೂಲಕ ಕಾಲುವೆ ಕೆಳಭಾಗದ ಕಾಲುವೆ ಮತ್ತು ಅಕ್ಕಪಕ್ಕದ ರೈತರ ಜಮೀನುಗಳಿಗೆ ನೀರು ಪೂರೈಕೆ ಮಾಡುವ ಗುರಿ ಹೊಂದಲಾಗಿದೆ.
ಯೋಜನೆಯಿಂದ 24ಕ್ಕೂ ಹೆಚ್ಚು ಗ್ರಾಮಗಳ ರೈತರ ಎರಡು ದಶಕಗಳ ಕನಸು ಈಗ ನನಸಾಗಿದೆ. ಪಂಪ್‌ಹೌಸ್, ಜಾಕ್‌ವೆಲ್, ನೀರಿನ ಘಟಕ, ಟ್ರಾನ್ಸರ್ಮರ್ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, ಯೋಜನೆಗೆ ವಿದ್ಯುತ್ ಸಮಸ್ಯೆಯಾಗಬಾರದು ಎನ್ನುವ ಕಾರಣಕ್ಕೆ ಗಿಣಿವಾರ ಗ್ರಾಮದಲ್ಲಿ ವಿದ್ಯುತ್ ಉಪ ಕೇಂದ್ರ ಸ್ಥಾಪಿಸಲಾಗಿದೆ.
ಯೋಜನೆ ಪೂರ್ಣಗೊಳಿಸುವಲ್ಲಿ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಹೆಚ್ಚಿನ ಪ್ರಯತ್ನ ನಡೆಸಿದ್ದು, ತಾಲೂಕಿನ ನೀರಾವರಿ ವಂಚಿತ ಪ್ರದೇಶಗಳಿಗೆ ನೀರು ಹರಿಸುವ ನಿಟ್ಟಿನಲ್ಲಿ ತಿಮ್ಮಾಪುರ ಏತ ನೀರಾವರಿ ಯೋಜನೆ ಅನುಕೂಲವಾಗಿದೆ. ತಾಲೂಕನ್ನು ಸಂಪೂರ್ಣವಾಗಿ ನೀರಾವರಿಗೆ ಒಳಪಡಿಸಲು ಪ್ರಯತ್ನಿಸುವುದಾಗಿ ಹೇಳುತ್ತಾರೆ.
ಕಾಮಗಾರಿ ಗುತ್ತಿಗೆ ಹಿಡಿದಿದ್ದ ಗುತ್ತಿಗೆದಾರ ಷರ್ುದ್ದೀನ್ ಅಲಿ, 2019ರಲ್ಲಿ ಕಾಮಗಾರಿ ಆದೇಶ ಪಡೆಯಲಾಗಿತ್ತು. ಆದರೆ ಕೋವಿಡ್ ಕಾರಣದಿಂದ ಕೆಲಸ ಸ್ಥಗಿತಗೊಂಡಿದ್ದರಿಂದ ಕಾಮಗಾರಿ ಪೂರ್ಣಗೊಳ್ಳಲು ವಿಳಂಬವಾಯಿತು ಎಂದು ತಿಳಿಸುತ್ತಾರೆ.