ಕಾರವಾರ: ಇಲ್ಲಿ ಕಾಸರೋಡ ಟೊಂಕ ಕಡಲ ತೀರದಲ್ಲಿ ಶನಿವಾರ ಎರಡು ತಿಮಿಂಗಿಲಗಳ ಕಳೆಬರ ಪತ್ತೆಯಾಗಿದೆ.
ಸುಮಾರು 25 ಮೀಟರ್ ಉದ್ಧದ ಹೆಣ್ಣು ಹಾಗೂ ಸ್ವಲ್ಪವೇ ದೂರದಲ್ಲಿ ತೀರದಲ್ಲಿ ಮರಿಯ ಕಳೆಬರ ಪತ್ತೆಯಾಗಿದೆ.
ಸಮೀಪದ ಮುಗಳಿ ತೀರದಲ್ಲಿ ಇದೇ ವಾರ ಇನ್ನೊಂದು ಗಂಡು ತಿಮಿಂಗಿಲ ಪತ್ತೆಯಾಗಿತ್ತು. ಒಂದೇ ವಾರದಲ್ಲಿ ಮೂರು ತಿಮಿಂಗಿಲಗಳ ಕಳೆಬರ ಪತ್ತೆಯಾದಂತಾಗಿದೆ. ಮೂರು ಬಲೇನ್ ಪ್ರಭೇದದ ತಿಮಿಂಗಿಲಗಳಾಗಿವೆ.
ಶನಿವಾರ ಹೊನ್ನಾವರ ಮೀನುಗಾರ ಮುಖಂಡ ರಾಜು ತಾಂಡೇಲ ಹಾಗೂ ಇತರರು ಅದನ್ನು ನೋಡಿ, ಕಡಲ ವಿಜ್ಞಾನಿಗಳಿಗೆ ಮಾಹಿತಿ ನೀಡಿದ್ದಾರೆ. ಅರಣ್ಯಾಧಿಕಾರಿಗಳು ತಿಮಿಂಗಿಲದ ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ.
ಏಕೆ ಸಾವು..?
ತಿಮಿಂಗಿಲಗಳ ಸಂತಾನೋತ್ಪತ್ತಿಯ ಕಾಲ ಇದಾಗಿದ್ದು, ಅವು ಸಂತಾನೋತ್ಪತ್ತಿದೆ. ಶೀತ ಸಮುದ್ರದಿಂದ ಸಮಶೀತೋಷ್ಣ ತೀರಕ್ಕೆ ಬರುತ್ತವೆ. ಇಲ್ಲಿ ಸಮುದ್ರದ ಉಬ್ಬರದಲ್ಲಿ ತೀರಕ್ಕೆ ಬಂದು ನಂತರ ವಾಪಸ್ ಹೋಗಲಾಗದೇ, ಕೆಲವು ಬಾರಿ ಕಲ್ಲುಬಂಡೆಗಳಿಗೆ ಡಿಕ್ಕಿಯಾಗಿ ಸಾವನ್ನಪ್ಪುತ್ತವೆ ಎನ್ನುತ್ತಾರೆ ಕಡಲ ಜೀವ ಶಾಸ್ತ್ರಜ್ಞ ಪ್ರಕಾಶ ಮೇಸ್ತ.