ಮಂಗಳೂರು : ಕೆಎಂಸಿ ಮತ್ತು ವೆನ್ಲಾಕ್ ಆಸ್ಪತ್ರೆಯ ಒಡಂಬಡಿಕೆಯಲ್ಲಿ ಇತ್ತೀಚೆಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಉದ್ಘಾಟನೆಗೊಂಡಿದ್ದ
ಕ್ಯಾತ್‌ಲ್ಯಾಬ್‌ನಲ್ಲಿ ಸೋಮವಾರ ಪ್ರಥಮ ಬಾರಿಗೆ ಆ್ಯಂಜಿಯೋಪ್ಲಾಸ್ಟಿ ಹಾಗೂ ಅ್ಯಂಜಿಯೋಗ್ರಾಮ್ ಚಿಕಿತ್ಸೆ ಕೆಎಂಸಿಯ ಕಾರ್ಡಿಯಾಲಜಿಸ್ಟ್
ಡಾ .ನರಸಿಂಹ ಪೈ ನೇತ್ರತ್ವದಲ್ಲಿ ನಡೆಯಿತು. ಡಾ. ಶೋಧನ್ ಐತಾಳ್, ಡಾ.ವಿಜಯ್ ನಾಗಪ್ಪ , ಟೆಕ್ನಿಶಿಯನ್‌ಗಳಾದ ನಿಶಿತ್ ನಾಯಕ್, ರುಫ್ಸಾನ, ನರ್ಸಿಂಗ್ ಸ್ಟಾಫ್ ಮೇರಿ, ಪ್ರಿಯಾ ಕ್ರಾಸ್ತ, ಸೌಮ್ಯ, ಜನ್ಯಶ್ರೀ ವೈದ್ಯಕೀಯ ತಂಡದಲ್ಲಿದ್ದರು. ಮಾಹೆ ವತಿಯಿಂದ ಸುಮಾರು 5 ಕೋಟಿ ರೂ. ವೆಚ್ಚ ಮಾಡಲಾಗಿದ್ದು , ಸ್ಟೆಂಟ್ ಹಾಗೂ ಇತರ ಔಷದ ಪರಿಕರಗಳನ್ನ ವೆನ್ಲಾಕ್ ಆಸ್ಪತ್ರೆಯಿಂದ ತರಿಸಲಾಗಿದೆ.
ಕಾತ್‌ಲ್ಯಾಬ್ ಸಂಪೂರ್ಣವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಬಿಪಿಎಲ್ ಕಾರ್ಡ್ ಇರುವವರಿಗೆ ಆಯುಷ್ಮಾನ್ ಅಡಿಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಡಾ.ಶರತ್ ಬಾಬು ನೋಡಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.