ಜಿಲ್ಲೆ

ಬಾವಿಯಲ್ಲಿ ತಾಯಿ, ಮಗಳ ಶವ ಪತ್ತೆ

Vijayapura - Desk - Chinnayya Chinnayyanamath

ಮುದ್ದೇಬಿಹಾಳ: ತಾಲೂಕಿನ ಹಂಡರಗಲ್ ಗ್ರಾಮದ ಹೊರವಲಯದಲ್ಲಿರುವ ತೆರೆದ ಬಾವಿ (ಹೊಂಡ) ಯಲ್ಲಿ ಸೋಮವಾರ ಸಂಜೆ ತಾಯಿ, ಮಗಳ ಶವ ಪತ್ತೆ ಆಗಿದೆ.

ಶವಗಳನ್ನು ಅದೇ ಗ್ರಾಮದ ರಿಹಾನಾ ಮಹೆಬೂಬಸಾಬ ಇನಾಮದಾರ (24), ಮಗಳು ಅಮೀರಾ ಮಹೆಬೂಬಸಾಬ ಇನಾಮದಾರ (5) ಎಂದು ಗುರುತಿಸಲಾಗಿದೆ.

ಮುದ್ದೇಬಿಹಾಳ ಅಗ್ನಿಶಾಮಕ ಠಾಣಾಧಿಕಾರಿ ಪ್ರಮೋದ ಸುಂಕದ, ಸಹಾಯಕ ಠಾಣಾಧಿಕಾರಿ ರಮೇಶ ಚಳ್ಳಣ್ಣವರ್, ಸಿಬ್ಬಂದಿ ಸುಭಾಷ ರಾಠೋಡ, ಸಿದ್ದಣ್ಣ ಪೋಲೇಸಿ, ಪ್ರಕಾಶ ಸುಬ್ಬನಗೋಳ, ಸುನೀಲ ನಾಯಕ, ಶ್ರೀಶೈಲಗೌಡ ಪಾಟೀಲ, ರವೀಂದ್ರ ರತ್ನಾಕರ ಅವರು ಸ್ಥಳಕ್ಕೆ ಧಾವಿಸಿ ಶವಗಳನ್ನು ಹೊರ ತೆಗೆಯಲು ಕಾರ್ಯಾಚರಣೆ ನಡೆಸಿದರು.

ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮುದ್ದೇಬಿಹಾಳದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಮುದ್ದೇಬಿಹಾಳ ಪೊಲೀಸ್ ಠಾಣೆಯ ಪಿಎಸ್‌ಐಗಳಾದ ಸಂಜಯ್ ತಿಪ್ಪರಡ್ಡಿ, ಆರ್.ಎಲ್.ಮನ್ನಾಭಾಯಿ ಸ್ಥಳಕ್ಕೆ ಭೇಟಿ ನೀಡಿ ಕಾನೂನು ಪ್ರಕ್ರಿಯೆ ನಡೆಸಿದ್ದಾರೆ.

ಕೆಲವರು ಮನೆಯಲ್ಲಿ ಜಗಳವಾಗಿದೆ ಎಂದರೆ, ಆಕೆಗೆ ಆರೋಗ್ಯ ಸಮಸ್ಯೆ ಇತ್ತು ಎಂದು ಇನ್ನು ಕೆಲವರು ಹೇಳುತ್ತಿದ್ದು ಪೊಲೀಸರ ತನಿಖೆಯ ನಂತರ ನಿಖರ ಕಾರಣ ಬೆಳಕಿಗೆ ಬರಲಿದೆ.

ಗೋವಾದಲ್ಲಿದ್ದ ಮಗಳು ಅಮೀರಾ ಊರಿಗೆ ಬಂದು ತಾಯಿಯೊಂದಿಗೆ ಪ್ರಾಣ ಕಳೆದುಕೊಂಡಿದ್ದು ವಿಧಿಯಾಟ ಎಂದು ಸ್ಥಳೀಯರು ಮರುಕಪಟ್ಟರು.