ಮಾಂಜರಿ: ಮಾನಸಿಕ ಅಸ್ವಸ್ಥೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದ ಬಾಣಂತಿಕೋಡಿ ಸಮೀಪ ಗುರುವಾರ ನಡೆದಿದೆ. ಮಯೂರಿ ಲಕ್ಷ್ಮಣ ಚಿತ್ರಗಾರ (34) ಮೃತ ಮಹಿಳೆ. ಅಂಕಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಯೂರಿ 3-4 ತಿಂಗಳ ಹಿಂದೆ ಕಾಣೆಯಾಗಿದ್ದರು ಎಂದು ತಂದೆ ಲಕ್ಷ್ಮಣ ಚಿತ್ರಗಾರ ಅವರು ಚಿಕ್ಕೋಡಿ ಠಾಣೆಯಲ್ಲಿ ಈ ಹಿಂದೆಯೇ ಪ್ರಕರಣ ದಾಖಲಿಸಿದ್ದರು.