ಜಿಲ್ಲೆ

ಬಾವಿಗೆ ಬಿದ್ದಿದ್ದ ಹೋರಿಗಳ ರಕ್ಷಣೆ

ಕೊಕಟನೂರ: ಅಥಣಿ ತಾಲೂಕಿನ ಮಲಾಬಾದ ಗ್ರಾಮದ ಹೊರವಲಯದ ತೋಟದಲ್ಲಿರುವ 40 ಅಡಿ ಆಳದ ಬಾವಿಯಲ್ಲಿ ಚಕ್ಕಡಿ ಸಮೇತ ಬಿದ್ದಿದ್ದ ಹೋರಿಗಳನ್ನು ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ವಿಠ್ಠಲ ಗುರುಬಸು ಮಾನೆ ಎಂಬುವವರಿಗೆ ಸೇರಿದ ಎರಡು ಹೋರಿಗಳಾಗಿದ್ದು, ಡಿ.10 ರಂದು ಚಕ್ಕಡಿ ಓಡಿಸುವ ತಾಲೀಮು ಮಾಡುತ್ತಿದ್ದ ವೇಳೆ ಹಗ್ಗ ಹರಿದು ಚಕ್ಕಡಿ ಸಮೇತ ಬಾವಿಗೆ ಬಿದ್ದಿವೆ. ಚಕ್ಕಡಿಯಲ್ಲಿದ್ದ ನಾಲ್ವರು ಜಿಗಿದು ಅಪಾಯದಿಂದ ಪಾರಾಗಿದ್ದಾರೆ.

ಒಂದು ಗಂಟೆ ಕಾರ್ಯಾಚರಣೆ ನಡೆಸಿ ಹೋರಿಗಳನ್ನು ರಕ್ಷಿಸಿದರು. ತನಿಖಾಧಿಕಾರಿ, ಆರ್.ಕೆ.ಸಂಭೋಜಿ, ಅನಿಲ ಬಡಚಿ, ಮಲ್ಲಿಕಾರ್ಜುನ ಕುಂಬಾರ, ಸುರೇಶ ಮಾದರ, ಸಂಜೀವ ಚೌಗಲಾ, ರಾಮು ಗುರವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.