ಲಿಂಗದಹಳ್ಳಿ: ಭಾರತೀಯ ಕಿಸಾನ್ ಸಂಘದ ಲಿಂಗದಹಳ್ಳಿ ಹೋಬಳಿ ಘಟಕಕ್ಕೆ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದ ಸದಸ್ಯರು ನೊಂದ ರೈತರ ಧ್ವನಿಯಾಗಿ ಕಾರ್ಯನಿರ್ವಹಿಸುವ ಮೂಲಕ ರೈತರ ಕಲ್ಯಾಣಕ್ಕೆ ಶ್ರಮಿಸಬೇಕು ಎಂದು ಭಾರತೀಯ ಕಿಸಾನ್ ಸಂಘದ ರಾಜ್ಯಪ್ರಧಾನ ಕಾರ್ಯದರ್ಶಿ ಮಲ್ಲೇನಹಳ್ಳಿ ಕೆ ಪರಮೇಶ್ವರಪ್ಪ ಹೇಳಿದರು.
ಭಾರತೀಯ ಕಿಸಾನ್ ಸಂಘ ಲಿಂಗದಹಳ್ಳಿ ಹೋಬಳಿ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಮಾತನಾಡಿದ ಅವರು, ತಾಲೂಕಿನ ರೈತರ ಜ್ವಾಲಂತ ಸಮಸ್ಯೆಗಳಾಗಿರುವ ಕಾಡುಪ್ರಾಣಿಗಳ ಹಾವಳಿ, ಬಗರ್ ಹುಕುಂ ಜಮೀನುಗಳ ಸಕ್ರಮಿಕರಣ, ತಾಲೂಕು ಕಚೇರಿಗಳಲ್ಲಿ ಆಗುತ್ತಿರುವ ವಿಳಂಬ ಧೋರಣೆ, ಮತ್ತು ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಭಾರತೀಯ ಕಿಸಾನ್ ಸಂಘ, ತರೀಕೆರೆ ಘಟಕ ಫೆ.17 ರಂದು ಬೆಳಗ್ಗೆ 10 ಗಂಟೆಗೆ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ತಾಲೂಕು ಕಚೇರಿವರಗೆ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಲಿಂಗದಹಳ್ಳಿ ಹೋಬಳಿ ಭಾರತೀಯ ಕಿಸಾನ್ ಸಂಘದ ನೂತನ ಘಟಕದ ಅಧ್ಯಕ್ಷರಾಗಿ, ಎಲ್.ಇ ಪ್ರಕಾಶ್, ಕಾರ್ಯದರ್ಶಿಯಾಗಿ,ವೀರಪ್ಪ, ಸದಸ್ಯರಾಗಿ ಮಲ್ಲಿಕಾರ್ಜುನ, ರವಿಕುಮಾರ್, ಎಲ್.ಎಂ.ಚಂದ್ರಪ್ಪ, ಮಲ್ಲಿಕಾರ್ಜುನ್, ಎಲ್.ಪಿ ಪ್ರಕಾಶ್ ಅವರನ್ನು ಆಯ್ಕೆ ಮಾಡಲಾಯಿತು.