ಜಿಲ್ಲೆ

ಗುಲಾಬಿ ಹೂ ನೀಡಿ ವಿಶೇಷ ಮಕ್ಕಳ ಸ್ವಾಗತ

ಮೈಸೂರು: ವಿಜಯನಗರ ಎರಡನೇ ಹಂತದಲ್ಲಿರುವ ಸಮರ್ಥನಂ ಬುದ್ಧಿ ವಿಕಲಚೇತನರ ಶಾಲೆಯಲ್ಲಿ ಬುಧವಾರ 2024-25ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಹಿರಿಯ ವಿಜ್ಞಾನಿ ಡಾ. ಜಿ.ಎ.ರವಿಶಂಕರ್ ಅವರು, ಗುಲಾಬಿ ಹೂ ಕೊಡುವ ಮೂಲಕ ಬುದ್ಧಿ ವಿಕಲಚೇತನ ಮಕ್ಕಳನ್ನು ಸ್ವಾಗತಿಸಿ, ವಿಶೇಷ ಮಕ್ಕಳು ಎಂದರೆ ಅವರು ದೇವರ ಮಕ್ಕಳು ಇದ್ದ ಹಾಗೆ. ಅವರಿಗೂ ಎಲ್ಲರಂತೆ ಸಮಾನವಾಗಿ ಬದುಕುವ ಹಕ್ಕಿದೆ ಎಂದು ಹೇಳಿ ಎಲ್ಲರಿಗೂ ಶುಭಾಶಯ ಕೋರಿದರು.
ಶಾಲೆಯ ಮೈಸೂರು ವಿಭಾಗದ ಮುಖ್ಯಸ್ಥ ಶಿವರಾಜು ಮಾತನಾಡಿ, ಸಮರ್ಥನಂ ಸಂಸ್ಥೆಯು ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳು ಸೇರಿದಂತೆ ತಂತ್ರಜ್ಞಾನ ಪೂರಕವಾದ ಸಾಮಗ್ರಿಗಳನ್ನು ಶಾಲೆಗಳಿಗೆ ವಿತರಣೆ ಮಾಡಿದ್ದು, ಮಕ್ಕಳ ಕಲಿಕೆಗೆ ತಂತ್ರಜ್ಞಾನ ಬಳಸುವ ಮೂಲಕ ಶಿಕ್ಷಣ ನೀಡುತ್ತಿದೆ ಎಂದು ವಿವರಿಸಿದರು.
ಮುಖ್ಯ ಶಿಕ್ಷಕಿ ಭ್ರಮರಂಭಾ, ವಿಶೇಷ ಶಿಕ್ಷಣ ಶಿಕ್ಷಕರಾದ ಪದ್ಮಾ, ವಿದ್ಯಾವತಿ, ಬೃಂದಾಬಾಯಿ, ಸಿಬ್ಬಂದಿ ಮಂಜುಳಾ, ಮಹದೇವ ಇತರರು ಇದ್ದರು. ಮಕ್ಕಳನ್ನು ಸ್ವಾಗತಿಸುವ ಸಲುವಾಗಿ ಬ್ಯಾನರ್, ಬಂಟಿಂಗ್ಸ್, ತೋರಣ ಹಾಗೂ ಆಕರ್ಷಕ ಸೂಚನೆ ಫಲಕಗಳನ್ನು ಹಾಕಲಾಗಿತ್ತು.