ಮೈಸೂರು: ಮದ್ರಾಸ್ ಇಂಜಿನಿಯರಿಂಗ್ ಮತ್ತು ತಂಡದ 224ನೇ ವಾರ್ಷಿಕೋತ್ಸವ ಹಾಗೂ 25ನೇ ಅಪರೇಷನ್ ವಿಜಯ್ ದಿವಸ ಅಂಗವಾಗಿ ಕೇರಳದ ತಿರುವನಂತಪುರಂನಿಂದ ಹೊರಟ ಬೈಕ್ ರ‌್ಯಾಲಿಯನ್ನು ನಗರದಲ್ಲಿ ಬುಧವಾರ ಸ್ವಾಗತಿಸಲಾಯಿತು.
ಜಯಲಕ್ಷ್ಮೀಪುರಂನಲ್ಲಿರುವ ಕೊಡಗು ಸಹಕಾರ ಸಂಘದ ಬಳಿಕ ಒಬ್ಬ ಮಹಿಳೆ ಸೇರಿದಂತೆ ಐವರ ತಂಡವನ್ನು ಸ್ವಾಗತಿಸಿ ಗೌರವಿಸಲಾಯಿತು. ನಿವೃತ್ತ ಮೇಜರ್ ಜನರಲ್ ಎಸ್.ಜಿ.ಒಂಬತ್ಕೆರೆ, ಮೈಸೂರು ಮಾಜಿ ಸೈನಿಕ ಸಂಘದ ಅಧ್ಯಕ್ಷ ಹವಲ್ದಾರ್ (ನಿವೃತ್ತ) ಪಿ.ಕೆ.ಬಿದ್ದಪ್ಪ, ಉಸ್ತುವಾರಿ ನರಸೇಗೌಡ ಇತರರು ಇದ್ದರು. ಮೈಸೂರು ಸಸ್ತ್ರ ಪಡೆಗಳ ಮಾಜಿ ಸೈನಿಕರ ಸಂಘ, ಕೊಡಗು ಸಹಕಾರ ಸಂಘ, ಎನ್‌ಸಿಸಿ ಇನ್ನಿತರೆ ಸಂಘಟನೆಗಳು ಬರ ಮಾಡಿಕೊಳ್ಳಲಾಯಿತು. ಮೈಸೂರಿನಿಂದ ಬೆಂಗಳೂರಿಗೆ ತೆರಳಿದ ಬೈಕ್ ರ‌್ಯಾಲಿಯ ಅಲ್ಲಿ ಬೃಹತ್ ಸಮಾವೇಶದ ಬಳಿಕ ಅಂತ್ಯಗೊಳ್ಳಲಿದೆ.