ಜಿಲ್ಲೆ

ಕುಷ್ಟಗಿ- ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಸ್ವಾಗತ

ಮುಂಡರಗಿ: ಕುಷ್ಟಗಿ- ಹುಬ್ಬಳ್ಳಿ ನೂತನ ಪ್ಯಾಸೆಂಜರ್ ರೈಲು ಗುರುವಾರದಿಂದ ಆರಂಭಗೊಂಡಿದ್ದು, ತಾಲೂಕಿನ ಹಳ್ಳಿಗುಡಿ ರೈಲ್ವೆ ಸ್ಟೇಷನ್‌ಗೆ ಗುರುವಾರ ಆಗಮಿಸಿದ ನೂತನ ರೈಲಿಗೆ ಗ್ರಾಮಸ್ಥರು ಹೂಮಾಲೆ ಹಾಕುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು.ಕುಷ್ಟ್ಟಗಿ- ಹುಬ್ಬಳ್ಳಿ ನೂತನ ಪ್ಯಾಸೆಂಜರ್ ರೈಲು ಸಂಚಾರಕ್ಕೆ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಅವರು ಕುಷ್ಟಗಿಯಲ್ಲಿ ಗುರುವಾರ ಹಸಿರು ನಿಶಾನೆ ತೋರಿದ್ದರು. ಈ ರೈಲು ಹಳ್ಳಿಗುಡಿ ಗ್ರಾಮದ ರೈಲ್ವೆ ಸ್ಟೇಷನ್‌ಗೆ ನಿಲುಗಡೆ ಇರುವುದರಿಂದ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.ನೂತನ ರೈಲ್ವೆ ಆರಂಭವಾಗಿರುವುದರಿಂದ ಕುಕನೂರ, ಯಲಬುರ್ಗಾ, ಕುಷ್ಟಗಿಗೆ ತೆರಳುವುದು ತುಂಬ ಅನುಕೂಲವಾಗಿದೆ. ಇದರಿಂದ ಬಡವರಿಗೆ ಪ್ರಯೋಜನವಾಗಲಿದ್ದು, ಪ್ರಯಾಣಿಕರಿಗೆ ಸದುಪಯೋಗವಾಗಲಿದೆ ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದರು. ಗ್ರಾಮದ ಪ್ರಮುಖರಾದ ಸೋಮನಗೌಡ ಕರಮುಡಿ, ದೊಡ್ಡಬಸಪ್ಪ ಚನ್ನಳ್ಳಿ, ಬಸವರಾಜ ಪುರದ, ಬಸನಗೌಡ ಗೌಡರ, ಜಗದೀಶ್ ಸಜ್ಜನರ, ಮನೋಹರ ಚನ್ನಳ್ಳಿ, ಅಶೋಕ ಚನ್ನಳ್ಳಿ, ಮೈಲಾರಗೌಡ ಕರಮುಡಿ, ಇತರರು ಇದ್ದರು.