ಲಕ್ಷ್ಮೇಶ್ವರ: ತಾ.ಪಂ. ಲಕ್ಷ್ಮೇಶ್ವರ, ಜಿ.ಪಂ. ಗದಗ ಹಾಗೂ ಸಮಾಜ ಕಲ್ಯಾಣ ಇಲಾಖೆ ಗದಗ ವತಿಯಿಂದ ತಾಲೂಕಿನ ರಾಮಗಿರಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವು ಬುಧವಾರ ಯಶಸ್ವಿಯಾಗಿ ಜರುಗಿತು.
ಪಟ್ಟಣದ ಮುನ್ಸಿಪಲ್ ಕಲಾ ಮಹಾವಿದ್ಯಾಲಯದ ಉಪನ್ಯಾಸಕ ಎಚ್.ಎನ್. ಕೆರೂರ ಉಪನ್ಯಾಸ ನೀಡಿ, ಸಂವಿಧಾನವು ದೇಶದ ಜನರನ್ನು ಆಳುವ ಸರ್ಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಅದು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನು ಸರ್ಕಾರದ ಮೂರು ಮುಖ್ಯ ಅಂಗಗಳಾಗಿ ಏರ್ಪಡಿಸುತ್ತದೆ. ಸಂವಿಧಾನವು ಪ್ರತಿ ಅಂಗದ ಅಧಿಕಾರದ ವ್ಯಾಖ್ಯೆಯನ್ನು ನೀಡುವುದಲ್ಲದೆ ಅವುಗಳ ಜವಾಬ್ದಾರಿಯನ್ನೂ ಖಚಿತಗೊಳಿಸುತ್ತದೆ ಎಂದರು.
ಬುಧವಾರ ಸಂಜೆಯ ವೇಳೆಗೆ ರಾಮಗಿರಿ ಪ್ರವೇಶಿಸಿದ ಜಾಗೃತಿ ಜಾಥಾವನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ರಂಗೋಲಿಯ ಚಿತ್ತಾರದಿಂದ ಕೂಡಿದ ಗ್ರಾಮದ ಮುಖ್ಯ ರಸ್ತೆಗಳಲ್ಲಿ ಶಾಲಾ ಮಕ್ಕಳ ವೇಷಭೂಷಣ, ಲೇಸಿಮ್ ಹಾಗೂ ಕೋಲಾಟ ತಂಡ ಹಾಗೂ ಗ್ರಾಮದ ಅಂಬೇಡ್ಕರ ಯುವಕ ಸಂಘದ ಮಜಲುಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದ ಶಾಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಅಡಿವೆಕ್ಕ ಬೆಟಗೇರಿ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಗ್ರಾಮದ ಹಿರಿಯರಾದ ಸೋಮಣ್ಣ ಬೆಟಗೇರಿ. ನೀಲೇಶಪ್ಪ ಕಾಳೆ, ಕೆ.ಬಿ. ಪಾಟೀಲ, ಈರಮ್ಮ ಮಡಿವಾಳರ ಗ್ರಾಪಂ ಸದಸ್ಯರಾದ ಅಶೋಕ.ಕಾಳಿ, ಯಲ್ಲಪ್ಪ ಬೆಟಗೇರಿ, ಚಿದಾನಂದ ಮಲ್ಲೂರ, ಅಣ್ಣಪ್ಪ ವಾಲ್ಮೀಕಿ, ರೇಣುಕಾ ಲಕ್ಕಣ್ಣವರ, ಅನ್ನಪೂರ್ಣ ಪೂಜಾರ, ಕವಿತಾ ಯಂಗಾಡಿ, ಕಮಲವ್ವ ತುಂಬಣ್ಣವರ. ಪಿಡಿಒ ಬಿ.ಬಿ. ತಳವಾರ, ಕಾರ್ಯದರ್ಶಿ ಎಂ.ಎಚ್. ನದಾಫ ಹಾಗೂ ಗ್ರಾಮದ ಗುರು-ಹಿರಿಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಸ್ತ್ರೀ-ಶಕ್ತಿ ಸಂಘಗಳ ಸದಸ್ಯರು, ರಾಮಗಿರಿ ಗ್ರಾಮದ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕ ವೃಂದ ಮತ್ತು ಗ್ರಾ.ಪಂ. ಸಿಬ್ಬಂದಿ ಇದ್ದರು.
ಕಾರ್ಯಕ್ರಮದ ನೋಡೆಲ್ ಅಧಿಕಾರಿ ಡಾ. ಎನ್.ಎ. ಹವಳದ ಸ್ವಾಗತಿಸಿದರು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶರಣಯ್ಯ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಸ್ಟೆಲ್ ಮೇಲ್ವಿಚಾರಕರಾದ ಎಚ್.ಎಂ. ಅರಳಿಹಳ್ಳಿ ವಂದಿಸಿದರು. ಶಿಕ್ಷಕಿ ಮೈತ್ರಾದೇವಿ ಸಾಲಿಮಠ ನಿರೂಪಿಸಿದರು.