ಬೈಂದೂರು: ಶ್ರೀ ರಾಮಚಂದ್ರಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮೀಜಿ ಮಾರ್ಗದರ್ಶನದಲ್ಲಿ ಶ್ರೀ ಸಂಸ್ಥಾನದವರಿಂದ ಚಾಲನೆಗೊಂಡು ಶ್ರೀ ಶಂಕರ ಪಂಚಮಿ ಕಾರ್ಯಕ್ರಮದ ಸಂಕಲ್ಪದೊಂದಿಗೆ ಶ್ರೀ ಕ್ಷೇತ್ರ ಗೋಕರ್ಣದ ಅಶೋಕೆಯಿಂದ ಹೊರಟ ಶ್ರೀ ಶಂಕರ ಭಗವತ್ಪಾದರ ಪಾದುಕೆ ಹೊತ್ತ ಅದ್ವೈತ ರಥ ಉಪ್ಪುಂದ ಮಠದ ಗಡಿಗೆ ತಲುಪಿದ್ದು, ಮಠದ ಶಿಷ್ಯರು ರಥವನ್ನು ಬರಮಾಡಿಕೊಂಡರು.
ಪಾದುಕೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಶಂಕರರ ಕುರಿತು ಶಂಕರನಾರಾಯಣ ಭಟ್ ಉಪನ್ಯಾಸ ನೀಡಿದರು. ಕುಂದಾಪುರ ವಲಯ ಅಧ್ಯಕ್ಷ ಪ್ರೊ. ನಾರಾಯಣ ಸ್ವಾಮಿ, ಕಾರ್ಯದರ್ಶಿ ನಾಗರಾಜ ಭಟ್, ಗುರುದತ್ ರಾವ್, ಸತ್ಯನಾರಾಯಣ ಪುರಾಣಿಕ, ಸುಭಾಶ್ಚಂದ್ರ ಪುರಾಣಿಕ, ಯು. ಸಂದೇಶ ಭಟ್, ದಿವಾಕರ ಶೆಟ್ಟಿ, ಲಕ್ಷ್ಮಣ ಖಾರ್ವಿ, ಮಂಜುನಾಥ ಖಾರ್ವಿ, ರೇಷ್ಮಾ ಭಟ್, ಲಕ್ಷ್ಮೀ ಪುರಾಣಿಕ್, ವರದಾ ಭಟ್, ನಾಗರಾಜ ಭಟ್, ಉಮೇಶ್ ಪುರಾಣಿಕ್, ಸುಬ್ರಹ್ಮಣ್ಯ ಭಟ್, ಸುರೇಶ್ ಭಟ್, ಪರಮೇಶ್ವರ ಭಟ್, ಶಾರದಾ ಪುರಾಣಿಕ್, ಅನಿಲ್ ಡಿ., ಗೌರಿ ದೇವಾಡಿಗ, ರಾಧಾ ಪೂಜಾರಿ, ವಿಜಯ ಭಟ್, ನಾಗರಾಜ ದೇವಾಡಿಗ ಇದ್ದರು. ಈ ಅದ್ವೈತ ರಥ ಕರ್ನಾಟಕ ರಾಜ್ಯ ಸೇರಿದಂತೆ ಕೇರಳ, ತಮಿಳುನಾಡು ರಾಜ್ಯದ ಕೆಲವು ಭಾಗಗಳಲ್ಲಿ ಸಂಚರಿಸಲಿದೆ.