ಉಪ್ಪಿನಂಗಡಿ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅರಿವು ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಕನ್ನಡ ಭುವನೇಶ್ವರಿ ರಥವನ್ನು ಉಪ್ಪಿನಂಗಡಿ ಪಂಚಾಯಿತಿ ಕಚೇರಿ ಬಳಿ ಪಂಚಾಯಿತಿ ಆಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಉಪ್ಪಿನಂಗಡಿ ಹೋಬಳಿ ಘಟಕದ ಆಶ್ರಯದಲ್ಲಿ ಹೂಹಾರ ಹಾಕಿ ಪುಷ್ಪಾರ್ಚನೆಗೈದು ಸ್ವಾಗತಿಸಲಾಯಿತು.
ದ.ಕ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀನಾಥ್, ಪಂಚಾಯಿತಿ ಅಧ್ಯಕ್ಷೆ ಲಲಿತಾ, ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು, ಕನ್ನಡ ಸಾಹಿತ್ಯ ಪರಿಷತ್ ಉಪ್ಪಿನಂಗಡಿ ಹೋಬಳಿ ಘಟಕ ಅಧ್ಯಕ್ಷ ಕರುಣಾಕರ ಸುವರ್ಣ, ಕೋಶಾಧಿಕಾರಿ ಡಾ.ಗೋವಿಂದಪ್ರಸಾದ್ ಕಜೆ, ಸಂಘಟನಾ ಕಾರ್ಯದರ್ಶಿ ನವೀನ್ ಬ್ರಾಗ್ಸ್, ಸದಸ್ಯರಾದ ಅಬ್ದುಲ್ ರಹಿಮಾನ್ ಯೂನಿಕ್, ಪಂಚಾಯಿತಿ ಸದಸ್ಯರಾದ ಧನಂಜಯ ನಟ್ಟಿಬೈಲ್, ಉಷಾ ಮುಳಿಯ, ರಶೀದ್, ಗ್ರಾಮಾಧಿಕಾರಿಗಳಾದ ಜಯಚಂದ್ರ, ನರಿಯಪ್ಪ, ಪಂಚಾಯಿತಿ ಕಾರ್ಯದರ್ಶಿ ಗೀತಾಶೇಖರ್, ಪ್ರಮುಖರಾದ ಯತೀಶ್, ಸುರೇಶ್ ಮುಡಿಪು, ಸಿದ್ದಿಕ್ ಕೆಂಪಿ, ಹೇಮಾವತಿ, ಚೈತ್ರಾ, ಆಶಾ, ಶುಭ, ಜ್ಯೋತಿ, ಇಕ್ಬಾಲ್, ಮಹಾಲಿಂಗ, ರಕ್ಷಿತ್, ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.