ಜಿಲ್ಲೆ

ಕರೊನಾ ಸೇನಾನಿಗೆ ಸ್ವಾಗತ

Dharwad

ಧಾರವಾಡ: ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಕರೋನಾ ಐಸೋಲೇಷನ್ ವಾರ್ಡ್​ನಲ್ಲಿ ಒಂದು ವಾರ ಕಾಲ ಕಾರ್ಯ ನಿರ್ವಹಿಸಿ ಶುಕ್ರವಾರ ಸ್ವ ಗೃಹಕ್ಕೆ ಮರಳಿದ ನರ್ಸಿಂಗ್ ಆಫೀಸರ್​ಗೆ ಅವರನ್ನು ಸ್ಥಳೀಯ ನಿವಾಸಿಗಳು ಸ್ವಾಗತ ಕೋರಿದರು.

ಇಲ್ಲಿನ ಸುತ್ತೂರ ಕಾಲನಿ ಮಧು ಅಪಾರ್ಟ್​ವೆುಂಟ್ ನಿವಾಸಿ ಜ್ಯೋತಿ ಕಲ್ಲೂರಮಠ ಎಂಬುವವರಿಗೆ ಸ್ವಾಗತ ಕೋರಲಾಯಿತು. ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಒಂದು ವಾರ ಕಾಲ ಐಸೋಲೇಷನ್ ವಾರ್ಡ್​ನಲ್ಲಿನ ರೋಗಿಗಳ ಆರೈಕೆಯಲ್ಲಿ ಜ್ಯೋತಿ ತೊಡಗಿದ್ದರು. ತಮ್ಮಿಂದ ಕುಟುಂಬದ ಸದಸ್ಯರಿಗೆ ಯಾವುದೇ ತೊಂದರೆ ಆಗದಿರಲಿ ಎಂಬ ಕಾರಣಕ್ಕೆ ಮನೆಗೆ ತೆರಳಿರಲಿಲ್ಲ. ಇದೀಗ ತಮ್ಮ ಸೇವೆ ಮುಗಿಸಿ ಮನೆಗೆ ಆಗಮಿಸಿದ ಸಂದರ್ಭದಲ್ಲಿ ಅಪಾರ್ಟ್​ವೆುಂಟ್ ನಿವಾಸಿಗಳು ಅವರಿಗೆ ಪುಷ್ಪವೃಷ್ಟಿ ಸಲ್ಲಿಸಿದರು. ಜ್ಯೋತಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಹೂಗುಚ್ಛ ನೀಡಿ ಆರತಿ ಎತ್ತಿ ಅಭಿನಂದನೆ ಸಲ್ಲಿಸಿದರು.