ಜಿಲ್ಲೆ

ಮಕ್ಕಳಿಗೆ ಹೂ ನೀಡಿ ಸ್ವಾಗತ

ಪ್ರಸಿನ್ ಕೆ.ಆರ್

ಕೊಳ್ಳೇಗಾಲ: ಪಟ್ಟಣದ ಶ್ರೀ ಶಿವ ಕೇಂದ್ರದಲ್ಲಿ 2025-26ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಹಿನ್ನ್ನೆಲೆಯಲ್ಲಿ ಸೋಮವಾರ ಮಕ್ಕಳಿಗೆ ಹೂ ನೀಡಿ ಶಿಕ್ಷಕರು ಸ್ವಾಗತಿಸಿದರು.

ಶ್ರೀ ಶಿವ ಕೇಂದ್ರದ ಕಾರ್ಯದರ್ಶಿ ಜಗದೀಶ್ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಓದಿನ ಜತೆ ಕೌಶಲ ಬೆಳೆಸಿಕೊಳ್ಳಬೇಕಿದೆ. ನಮ್ಮ ಶಾಲೆಯು ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ ಎಂದರಲ್ಲದೆ, ನೂತನ ವರ್ಷದ ಶೈಕ್ಷಣಿಕ ಸಾಲಿಗೆ ಶುಭಾ ಹಾರೈಸಿದರು.

ಕಾರ್ಯಕ್ರಮದಲ್ಲಿ ಶ್ರೀ ಶಿವ ವಿದ್ಯಾಕೇಂದ್ರದ ನಿಕಟ ಪೂರ್ವ ಕಾರ್ಯದರ್ಶಿ ದಿನೇಶ್ ಬಾಬು, ಆಡಳಿತ ಮಂಡಳಿಯ ಸದಸ್ಯರು, ಮುಖ್ಯಶಿಕ್ಷಕಿ ಸೌಮ್ಯಾ, ಸಹಶಿಕ್ಷಕರು ಇದ್ದರು.