ಜಿಲ್ಲೆ

ಪ್ರಥಮ ವರ್ಷದ ವಿದ್ಯಾಥಿಗಳಿಗೆ ಸ್ವಾಗತ ಸಮಾರಂಭ

ಮೈಸೂರು: ನಗರದ ವರ್ತುಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಪ್ರಥಮ ವರ್ಷದ ವಿದ್ಯಾಥಿಗಳಿಗೆ ಸ್ವಾಗತ ಸಮಾರಂಭ ಆಯೋಜಿಸಲಾಗಿತ್ತು.
ಸಂಸ್ಥೆಯ ಕಾರ್ಯದರ್ಶಿ ಡಾ.ಗಿಣಿಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳು ಎಂದಿಗೂ ಶಿಸ್ತು, ತಾಳ್ಮೆ, ವಿನಯ ಕಳೆದುಕೊಳ್ಳಬಾರದು. ವಿದ್ಯಾರ್ಥಿಗಳು ಕಾಲೇಜಿನಲ್ಲಿ ಶ್ರದ್ಧೆಯಿಂದ ಓದುವ ಕಡೆ ಗಮನಹರಿಸಿ ತಮ್ಮ ಗುರಿಯನ್ನು ಉತ್ತಮ ರೀತಿಯಲ್ಲಿ ತಲುಪಬೇಕೆಂದು ಅಭಿಪ್ರಾಯಿಸಿದರು.
ಮಾರ್ವೆಲ್ ಕಾಲೇಜಿನ ಅಧ್ಯಕ್ಷ ನಾರಾಯಣಪ್ಪ ಮಾತನಾಡಿ, ಪ್ರತಿಭೆ ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಇರುತ್ತದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಓದಿನ ಜೊತೆಗೆ ಕಲೆ, ಸಾಹಿತ್ಯ, ಕ್ರೀಡೆ, ನೃತ್ಯ, ಸಂಗೀತ ಸೇರಿದಂತೆ ಸಹಪಠ್ಯ ಚಟುವಟಿಕೆಗಳನ್ನು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲೆ ಮಾನಸ, ಉಪನ್ಯಾಸಕರಾದ ಕಾರ್ತಿಕ್ ನಾಯಕ್, ಸೌಮ್ಯ, ವೇದಮೂರ್ತಿ ಸೇರಿದಂತೆ ಇತರರು ಇದ್ದರು.