ಜಿಲ್ಲೆ

ಭಾರತೀ ವಿದ್ಯಾಪೀಠದಲ್ಲಿ ಸ್ವಾಗತ ಭಾರತೀ ಕಾರ್ಯಕ್ರಮ

ಸೌಮ್ಯ ಆರ್

ಕುಂಬಳೆ: ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ 2025-26ನೇ ಸಾಲಿನ ಪ್ರವೇಶೋತ್ಸವ ಸ್ವಾಗತ ಭಾರತೀ ಕಾರ್ಯಕ್ರಮ ಸೋಮವಾರ ನಡೆಯಿತು.

ಬಾಲಕೃಷ್ಣ ಶರ್ಮಾ ಅನಂತಪುರ ಅಧ್ಯಕ್ಷತೆ ವಹಿಸಿ, ಭಾರತೀಯ ಸಂಸ್ಕೃತಿ ನಮ್ಮ ಹೆಮ್ಮೆ. ವಿದ್ಯಾರ್ಜನೆಯೊಂದಿಗೆ ಇದು ಕೂಡ ನಮ್ಮಲ್ಲಿ ಬೆಳೆಯಬೇಕು. ವಿದ್ಯಾಪೀಠ ಶಾಲೆ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದರು.

ಎಡನಾಡು- ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕ ನಟೇಶ ಮದನಗುಳಿ ವಿದ್ಯಾರ್ಥಿಗಳಿಗೆ ಬ್ಯಾಂಕ್ ವತಿಯಿಂದ ಕಲಿಕೋಪಕರಣ ನೀಡಿ ಸ್ವಾಗತಿಸಿದರು. ರಕ್ಷಕ-ಶಿಕ್ಷಕ ಸಂಘ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಭಟ್ ಚೆಕ್ಕಣಿಕೆ ಶುಭ ಹಾರೈಸಿದರು. ಮುಖ್ಯ ಶಿಕ್ಷಕ ಶ್ಯಾಮ್ ಭಟ್ ದರ್ಬೆಮಾರ್ಗ ಅವರು ವಿದ್ಯಾಸಂಸ್ಥೆಯ ರಜತ ವರ್ಷದ ಯೋಜನೆಗಳನ್ನು ವಿವರಿಸಿದರು. ಶಿಕ್ಷಕಿ ಸೌಮ್ಯಾ ಸ್ವಾಗತಿಸಿದರು. ದೇವಿಕಾ ಮಾತಶ್ರೀ ವಂದಿಸಿದರು. ಶಿಕ್ಷಕಿ ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು.