Dasara 2013: Weights of the elephants in kgs were - Arjuna, Gajendra, Balarama, Abhimanyu, Varalakshmi and Sarala 
ಜಿಲ್ಲೆ

ಭಾರ ಹೊರುವ ತಾಲೀಮು : ದಸರಾ ಗಜಪಡೆಗೆ ವಿಶ್ರಾಂತಿ

ಸದೇಶ್ ಕಾರ್ಮಾಡ್

ಮೈಸೂರು: ಅಂಬಾರಿ ಆನೆ ಅಭಿಮನ್ಯು ನೇತೃತ್ವದ ಗಜಪಡೆಗೆ ಶನಿವಾರ ಭಾರ ಹೊರುವ ತಾಲೀಮಿನಿಂದ ವಿಶ್ರಾಂತಿ ನೀಡಲಾಯಿತು.

ಅರಮನೆ ಆವರಣಕ್ಕೆ ಸೆ.5 ರಂದು ಗಜಪಡೆ ಆಗಮಿಸಿ ಸೆ.14ರವರೆಗೆ ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ನಡಿಗೆ ತಾಲೀಮು ನಡೆಸಿತ್ತು. ಶುಕ್ರವಾರ ಅಂಬಾರಿ ಆನೆ ಅಭಿಮನ್ಯು ಭಾರ ಹೊರುವ ತಾಲೀಮು ಪ್ರಾರಂಭಿಸಿತು. ಶನಿವಾರ ಆನೆಗಳಿಗೆ ಭಾರ ಹೊರುವ ತಾಲೀಮಿನಿಂದ ವಿಶ್ರಾಂತಿ ನೀಡಲಾಗಿದ್ದು, ಭಾನುವಾರ ಮಹೇಂದ್ರ ಆನೆಯು ಭಾರ ಹೊರುವ ತಾಲೀಮು ನಡೆಸಲಿದೆ. ದಿನ ಬಿಟ್ಟು ದಿನ ಆನೆಗಳು ಭಾರ ಹೊರುವ ತಾಲೀಮು ನಡೆಸಲಿದೆ.