ರಾಮದುರ್ಗ: ಖಾನಪೇಠ ಶ್ರೀಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಖಾನಪೇಠದ ತೂಕದ ಸೇತುವೆಯನ್ನು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಜಿಲ್ಲಾ ಸಹಾಯಕ ನಿಯಂತ್ರಣಾಧಿಕಾರಿ ಶ್ರೀಕಾಂತ ಬುರನ್ಪುರ ಹಾಗೂ ಎಂಪಿಎಂಸಿ ಅಧಿಕಾರಿ ಶಿವಾನಂದ ಮಠದ ಶುಕ್ರವಾರ ಪರಿಶೀಲಿಸಿದರು.
ರೈತರ ಸಮ್ಮುಖದಲ್ಲಿ ಡಿಜಿಟಲ್ ಯಂತ್ರ ಪ್ರದರ್ಶನ ಮೂಲಕ ಪರಿಶೀಲಿಸಿದ ಅಧಿಕಾರಿಗಳು, ಅದರ ನೈಜತೆ ಬಗ್ಗೆ ಪರಿಶೀಲನೆ ಮಾಡಿದರು.
ಪ್ಯಾರಿ ಸಕ್ಕರೆ ಕಾರ್ಖಾನೆಯ ಮುಖ್ಯ ವ್ಯವಸ್ಥಾಪಕ ಶಿವಸುಬ್ರಮಣಿಯನ್ ಪಿ., ಅಧಿಕಾರಿಗಳಾದ ರಮೇಶ ಗಂಗರಡ್ಡಿ, ಬಸವರಾಜ ಪಾರಶೆಟ್ಟಿ, ಕೃಷ್ಣಾ ಬೂದಿ, ಸುರೇಶ ಬಡಿಗೇರ, ಕೃಷ್ಣಾ ಹೊಸೂರ, ರೈತರಾದ ಬಸವರಾಜ ಹಂಜಿ, ಬಸನಗೌಡ ಕಳಸಪ್ಪನವರ, ಮಾರುತಿ ಕರಿಗಾರ, ಯಲ್ಲಪ್ಪ ಮುಗಜೋಳ, ನದಿಹುಸೇನ್ ಮುಜಾವರ, ಮಾರುತಿ ಪೂಜಾರ, ಹಜರತ್ ಸಾಬ್ ಬಂಡ್ರಾಳ್ಳಿ, ಬಸಪ್ಪ ಬಸಿಡೋಣಿ, ಮಾಬುಸಾಬ್ ಸಂಗಳ, ವಿಠ್ಠಲ ಬುಕ್ಕಟಗಿ ಇತರರಿದ್ದರು.