ಜಿಲ್ಲೆ

ದ.ಕ., ಉಡುಪಿ ವಾರಾಂತ್ಯ ಕರ್ಫ್ಯೂ

ಮಂಗಳೂರು: ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕೋವಿಡ್ ಪಾಸಿಟಿವ್ ಪ್ರಕರಣಗಳು ಗಮನಾರ್ಹ ಪ್ರಮಾಣದಲ್ಲಿ ಪತ್ತೆಯಾಗುತ್ತಿರುವ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂ ಮುಂದುವರಿಸಿ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ. ಇದೇ ಸಂದರ್ಭ ಉಡುಪಿ ಹಾಗೂ ಹಾಸನ ಜಿಲ್ಲೆಗಳಲ್ಲಿ ಕೂಡ ವಾರಾಂತ್ಯದ ಕರ್ಫ್ಯೂ ಆರಂಭಿಸಲು ನಿರ್ದೇಶಿಸಲಾಗಿದೆ.

ಬೆಳಗಾವಿ, ಬೀದರ್, ವಿಜಯಪುರ, ಕಲಬುರ್ಗಿ, ಮೈಸೂರು ಮತ್ತು ಚಾಮರಾಜನಗರದಲ್ಲಿ ಜಾರಿಯಲ್ಲಿದ್ದ ವಾರಾಂತ್ಯದ ಕರ್ಫ್ಯೂ ಆದೇಶವನ್ನು ವಾಪಸ್ ಪಡೆಯಲಾಗಿದೆ. ವಾರಾಂತ್ಯದ ಕರ್ಫ್ಯೂ ಸಂದರ್ಭ ಪರೀಕ್ಷೆಗೆ ಹಾಜರಾಗುವವರು ತಮ್ಮ ಪರೀಕ್ಷೆ ಪ್ರವೇಶಪತ್ರವನ್ನೇ ಗುರುತಿನ ಚೀಟಿಯಾಗಿ ಉಪಯೋಗಿಸಿ ಪ್ರಯಾಣಿಸಬಹುದು. ಕೇರಳದ ನಿವಾಸಿಗಳು ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿ ಪ್ರದರ್ಶಿಸಿ ಪ್ರಯಾಣಿಸಬಹುದು.