ಅಳವಂಡಿ: ವಲಯದ ವ್ಯಾಪ್ತಿಯ ಗ್ರಾಮಗಳಲ್ಲಿ ಶನಿವಾರ ಗಣೇಶ ಚತುರ್ಥಿ ಅಂಗವಾಗಿ ಹಬ್ಬದ ಸಂಭ್ರಮ ಮನೆ ಮಾಡಿತ್ತು.
ಗಣೇಶ ಪ್ರತಿಷ್ಠಾಪನೆಗೆಗಾಗಿ ಯುವಕರು ವಿದ್ಯುತ್ ದೀಪ, ಅಲಂಕಾರಿಕ ವಸ್ತುಗಳು ಹಾಗೂ ಹೂಗಳಿಂದ ಗದ್ದುಗೆ ನಿರ್ಮಿಸಿದ್ದರು. ವಾದ್ಯ ಮೇಳದೊಂದಿಗೆ ಮೆರವಣಿಗೆ ಮೂಲಕ ಮೂರ್ತಿಯನ್ನು ಬರಮಾಡಿಕೊಳ್ಳಲಾಯಿತು.
ಭಕ್ತರು ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಕ್ಕಳು ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಶಾಲಾ ಕಾಲೇಜು, ಯುವಕ ಮಂಡಳಿಗಳು ಹಾಗೂ ಮನೆಮನೆಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲಾಗಿತ್ತು.