ಜಿಲ್ಲೆ

ಮನೆ ಮೇಲೆ ಉರುಳಿದ ಮದುವೆ ದಿಬ್ಬಣದ ಬಸ್, ಐವರು ಸ್ಥಳದಲ್ಲೇ ಸಾವು

arunakunigal

ಮಂಗಳೂರು: ಮದುವೆ ದಿಬ್ಬಣಕ್ಕೆ ಹೊರಟಿದ್ದ ಬಸ್​ವೊಂದು ಮನೆ ಮೇಲೆ ಉರುಳಿ ಬಿದ್ದಿದ್ದು. ಸ್ಥಳದಲ್ಲೇ ಐವರು ದುರ್ಮರಣಕ್ಕೀಡಾಗಿದ್ದಾರೆ.

ಕರ್ನಾಟಕ -ಕೇರಳ ಗಡಿಭಾಗದ ಕಲ್ಲಪಳ್ಳಿ ಬಳಿ ಭಾನುವಾರ ಈ ಅವಘಡ ಸಂಭವಿಸಿದೆ. ಕೊಡಗಿನ ಕರಿಕೆಯಲ್ಲಿ ಮದುವೆ ಕಾರ್ಯಕ್ರಮ ಇತ್ತು.

ಮದುವೆ ಮನೆಗೆ 63 ಮಂದಿಯನ್ನು ಬಸ್​ನಲ್ಲಿ ಕರೆದೊಯ್ಯಲಾಗುತ್ತಿತ್ತು. ಮಾರ್ಗ ಮಧ್ಯೆ ಅಂದ್ರೆ ಕೇರಳದ ಕಾಸರಗೋಡು ಜಿಲ್ಲೆಯ ಕಲ್ಲಪಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಮನೆ ಮೇಲೆ ಉರುಳಿದೆ. ಬಸ್​ನಲ್ಲಿದ್ದ ಐವರು ಮೃತಪಟ್ಟಿದ್ದು. ಹಲವರು ಗಂಭೀರ ಗಾಯಗೊಂಡಿದ್ದಾರೆ.