ನೇಸರಗಿ: ಸಾಲಬಾಧೆಯಿಂದ ಸಮೀಪದ ದೇಶನೂರ ಗ್ರಾಮದ ನೇಕಾರ ವಿಶ್ವನಾಥ ಬಾಬು ಗೋಂದಕರ (42) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಟನೆ ಶುಕ್ರವಾರ ನಡೆದಿದೆ. ಮೃತನು ಖಾಸಗಿ ಹಾಗೂ ಸರ್ಕಾರಿ ಬ್ಯಾಂಕ್ಗಳಲ್ಲಿ 6 ಲಕ್ಷ ರೂ. ಸಾಲ ಮಾಡಿದ್ದ. ಇದನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪ್ರಕರಣ ದಾಖಲಿಸಿಕೊಂಡಿರುವ ನೇಸರಗಿ ಠಾಣೆ ಪೊಲೀಸರು ತಿಳಿಸಿದ್ದಾರೆ. ಮತನಿಗೆ ತಾಯಿ, ಪತ್ನಿ, ಪುತ್ರ ಇದ್ದಾರೆ. ಟನಾ ಸ್ಥಳಕ್ಕೆ ನೇಸರಗಿ ಠಾಣೆ ಪಿಎಸ್ಐ ಆರ್.ಬಿ.ಗೌಡರ, ಮುಖ್ಯ ಪೇದೆ ಜಿ.ಎಚ್.ಗುಡದಾಪುರ ಪರಿಶೀಲಿಸಿದರು.