ಜಿಲ್ಲೆ

ಸಾಲಬಾಧೆಯಿಂದ ನೇಕಾರ ಆತ್ಮಹತ್ಯೆ

ವಿಠ್ಠಲ ಹಣಮಂತ ಬಾಳೇಕುಂದ್ರಿ

ಮೂಡಲಗಿ: ಸಾಲಬಾಧೆಯಿಂದ ನೇಕಾರನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಟನೆ ತಾಲೂಕಿನ ನಾಗನೂರ ಪಟ್ಟಣದಲ್ಲಿ ಗುರುವಾರ ನಡೆದಿದೆ.

ನಾಗನೂರ ಪಟ್ಟಣದ ರಮೇಶ ಮರಿಜಾಡರ (37) ಮೃತ ನೇಕಾರ. ರಮೇಶ ನೇಕಾರಿಕೆ ಉದ್ಯೋಗಕ್ಕಾಗಿ ಸಾಲ ಮಾಡಿದ್ದರು. ಉದ್ಯೋಗ ಸರಿಯಾಗಿ ನಡೆಯದೇ ನಷ್ಟ ಅನುಭವಿಸಿದ್ದರು. ಸಾಲಬಾಧೆಯಿಂದ ಬೇಸತ್ತಿದ್ದ ಅವರು ಗುರುವಾರ ಬೆಳಗ್ಗೆ ನೇಕಾರಿಕೆ ಮಾಡುವ ಶೆಡ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಮೂಡಲಗಿ ಪೊಲೀಸರು ತಿಳಿಸಿದ್ದಾರೆ.