ಜಿಲ್ಲೆ

ಹೆಲ್ಮೆಟ್ ಧರಿಸಿ ಬೈಕ್ ಓಡಿಸಿ

ರೋಣ: ದ್ವಿಚಕ್ರ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಇದರಿಂದ ಅಪಘಾತಗಳಲ್ಲಿ ಆಗುವ ಹಾನಿ ತಪ್ಪಿಸಬಹುದು ಎಂದು ರೋಣ ಪಿಎಸ್​ಐ ಪ್ರಕಾಶ ಬಣಕಾರ ಹೇಳಿದರು.

ತಾಲೂಕಿನ ಸವಡಿ ಗ್ರಾಮದ ಸಂಗಮೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಇತ್ತೀಚೆಗೆ ಆಯೋಜಿಸಿದ್ದ ಜಾತ್ರಾ ಮಹೋತ್ಸವದ ಪೂರ್ವಭಾವಿ ಹಾಗೂ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

ಬೈಕ್ ಸವಾರರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲನೆ ಮಾಡಬೇಕು. ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡಬಾರದು. ಹೆಲ್ಮೆಟ್ ಹಾಕಿಕೊಳ್ಳದಿದ್ದರೆ ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ ಎಂದರು.

ಇತ್ತೀಚೆಗೆ ಸೈಬರ್ ಅಪರಾಧಗಳು ಹೆಚ್ಚಾಗಿವೆ. ಪೊಲೀಸ್, ಜಡ್ಜ್, ಕಸ್ಟಮ್್ಸ ಅಧಿಕಾರಿಗಳು ಎಂದು ಸುಳ್ಳು ಹೇಳಿ ಜನರನ್ನು ವಂಚನೆ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಯಾವುದೇ ಅನಾಮಿಕ ವ್ಯಕ್ತಿಯಿಂದ ಕರೆಗಳು ಬಂದಲ್ಲಿ ಪ್ರತಿಕ್ರಿಯೆ ನೀಡದೆ ಜಾಗೃತಿ ವಹಿಸಬೇಕು. ಅನುಮಾನ ಬಂದಲ್ಲಿ ಸ್ಥಳೀಯ ಠಾಣೆಗೆ ದೂರು ನೀಡಬೇಕು ಎಂದು ತಿಳಿಸಿದರು.

ಪೇದೆ ಎಚ್. ಡೊನ್ನಿಗುಡ್ಡ, ಸಂಗಮೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮಂಜುನಾಥ ಗದಗ, ಕಾರ್ಯದರ್ಶಿ ಸಂಗಣ್ಣ ದಂಡಿನ, ಆಯ್.ಎಸ್. ಶೀಲವಂತರ, ಭುಜಂಗಯ್ಯ ಹಿರೇಮಠ, ಎ.ಪಿ. ಪವಾಡಶೆಟ್ಟಿ, ಸಿ.ಎಸ್. ಗದಗ, ಎಸ್.ಎಂ. ಕತ್ತಿ, ಬಿ.ಸಿ. ಗುಳೇದ, ವೀರನಗೌಡ, ಇತರರಿದ್ದರು.