raichur 
ಜಿಲ್ಲೆ

ಸಂಭ್ರಮದಿಂದ ಆಯುಧ ಪೂಜೆ ಆಚರಣೆ

Raichur - Reporter - Rachhai Swamy

 ರಾಯಚೂರು ನಗರ ಸೇರಿದಂತೆ ಜಿಲ್ಲಾಧ್ಯಂತ ದಸರಾ ಹಬ್ಬದ ನಿಮಿತ್ತ ಪೋಲಿಸ್ ಠಾಣೆ ಸೇರಿದಂತೆ ನಾನಾ ಕಚೇರಿ ಅಂಗಡಿಗಳಲ್ಲಿ ಸಂಭ್ರಮದಿಂದ ಆಯುಧ ಪೂಜೆಯನ್ನು ಬುಧವಾರ ನಡೆಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಾಹನಗಳನ್ನು ಶೃಂಗರಿಸಿ ಅಧಿಕಾರಿಗಳು ಮತ್ತು ಸಿಬ್ಬಂಧಿಗಳು ಪೂಜೆ ನೆರವೇರಿಸಿದರು. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟ ಮಾದಯ್ಯ ಅವರು ವಾಹನ ಮತ್ತು ಆಯುಧಗಳಿಗೆ ವಿಶೇಷ ಪೂಜೆ ನೆರವೇರಿಸಿದರು.

ಮಹಾನಗರ ಪಾಲಿಕೆ ಕಚೇರಿಯಲ್ಲಿ ಆಯುಧ ಪೂಜೆ ಸಂಭ್ರಮದಿಂದ ಜರುಗಿತು. ಸರ್ಕಾರಿ ಕಚೇರಿ ಸೇರಿದಂತೆ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರು ವಾಹನಗಳನ್ನು ಹೂಗಳಿಂದ ಶೃಂಗರಿಸಿ ಆಯುಧ ಪೂಜೆ ನೆರವೇರಿಸಿ ದಸರಾ ಹಬ್ಬ ಸಂಭ್ರಮಿಸಿದರು.