ವಿಜಯಪುರ: ವಿಜಯಪುರ ಪೊಲೀಸ್ ಅಧೀಕ್ಷಕರ ವರದಿಯನ್ವಯ ತಿಕೋಟಾ ತಾಲೂಕಿನ ಲೋಗಾಂವದ ರಾಜುಗೌಡ ಸಿದ್ಧಲಿಂಗಪ್ಪ ಬಿರಾದಾರ ಹಾಗೂ ಪಿಂಟು ಲಮಾಣಿ ಅವರಿಗೆ ಆತ್ಮರಕ್ಷಣೆ ಸಲುವಾಗಿ ನೀಡಿದ್ದ ಆಯುಧ ಪರವಾನಗಿ ದುರುಪಯೋಗಪಡಿಸಿಕೊಂಡ ಹಿನ್ನೆಲೆಯಲ್ಲಿ ಭಾರತೀಯ ಆಯುಧ ಕಾಯ್ದೆ 1959ರ ಕಲಂ 17(3)(ಬಿ) ಮತ್ತು 17(3)(ಡಿ) ಅನ್ವಯ ಅವರ ಆಯುಧಗಳ ಪರವಾನಗಿ ಅಮಾನತುಗೊಳಿಸಿ ವಿಚಾರಣೆ ಕಾಯ್ದಿರಿಸಿ ಜಿಲ್ಲಾಧಿಕಾರಿ ಟಿ. ಭೂಬಾಲನ್ ಆದೇಶಿಸಿದ್ದಾರೆ.
ಸದರಿ ಪರವಾನಗಿದಾರರು ತಾವು ಹೊಂದಿರುವ ಆಯುಧವನ್ನು ಕೂಡಲೇ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಗೆ ತಂದು ಜಮೆ ಮಾಡುವಂತೆಯೂ ಆದೇಶದಲ್ಲಿ ತಿಳಿಸಿದ್ದಾರೆ.