ಮೈಸೂರು: ಜಿಲ್ಲೆಯಲ್ಲಿ ಮುಂಗಾರು ಮಳೆ ತನ್ನ ಆರ್ಭಟವನ್ನು ಕ್ಷೀಣಗೊಳಿಸಿದ್ದು, ಮುಂದಿನ 4 ದಿನಗಳವರೆಗೆ ಮೋಡ ಕವಿದ ವಾತಾವರಣ ಕಾಣಿಸಿಕೊಂಡು ತುಂತುರುವಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೇರಳಕ್ಕೆ ಮೇ 24 ರಂದು ಮುಂಗಾರು ಪ್ರವೇಶಿಸಿತ್ತು. ಜಿಲ್ಲೆಯಲ್ಲೂ ಮೇ 24 ರಿಂದ ಭಾರಿ ಮಳೆ ಸುರಿಯಲು ಪ್ರಾರಂಭಿಸಿತ್ತು. ಭಾನುವಾರ ಮತ್ತು ಸೋಮವಾರ ದಿನವಿಡೀ ಮಳೆಯ ಆರ್ಭಟಿಸಿತು. ಆದರೆ, ಇದೀಗ ಮುಂಗಾರುವಿನ ಅಬ್ಬರ ಸಂಪೂರ್ಣ ತಗ್ಗಿದ್ದು, ಜಿಲ್ಲೆಯಲ್ಲಿ ಬೆಳಗ್ಗಿನಿಂದ ಸಂಜೆವರೆಗೆ ಬಿಸಿಲಿನ ವಾತಾವರಣ ಕಂಡು ಬಂತು.
4 ದಿನ ಮಳೆ ದುರ್ಬಲ:
ಜಿಲ್ಲೆಯಲ್ಲಿ ಮೇ 29 ರಿಂದ ಜೂ.1ರವರೆಗೆ ಮೋಡ ಕವಿದ ವಾತಾವರಣ ಕಾಣಿಸಿಕೊಂಡು ತುಂತುರುವಿನಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಮುಂದಿನ ಮೂರು ಅಥವಾ ನಾಲ್ಕು ದಿನಗಳಲ್ಲಿ ಶಿತಿಲಗೊಳ್ಳುತ್ತಿದ್ದಂತೆಯೇ ಮುಂಗಾರು ದುರ್ಬಲಗೊಳ್ಳುವ ಸಾಧ್ಯತೆಗಳಿವೆ. ಜೂನ್ ಮೊದಲ ವಾರದಲ್ಲಿ ರಾಜ್ಯದಲ್ಲಿ ಬಿಸಿಲಿನ ವಾತಾವರಣದ ಮುನ್ಸೂಚನೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಾಗನಹಳ್ಳಿಯ ಗ್ರಾಮೀಣ ಕೃಷಿ ಹವಾಮಾನ ಸೇವಾ ವಿಭಾಗದ ಹಿರಿಯ ಅಧೀಕ್ಷಕ ಡಾ.ಸಿ.ರಾಮಚಂದ್ರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೇ 29 ರಂದು 20 ಮಿ.ಮೀ., 30 ರಂದು 19 ಮಿ.ಮೀ., 31 ರಂದು 24 ಮಿ.ಮೀ., ಜೂ.1 ರಂದು 11 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಕನಿಷ್ಠ 19 ರಿಂದ 20, ಗರಿಷ್ಠ 26 ರಿಂದ 27 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಾಣಿಸಿಕೊಳ್ಳಲಿದ್ದು, ಗಾಳಿಯು ಗಂಟೆಗೆ 14 ರಿಂದ 18 ಕಿ.ಮೀ. ವೇಗದಲ್ಲಿ ಬೀಸಲಿದೆ.
ತಾಲೂಕುವಾರು ವಿವರ:
ಎಚ್.ಡಿ. ಕೋಟೆ ತಾಲೂಕಿನಲ್ಲಿ ಮೇ 29 ರಂದು 6.8 ಮಿ.ಮೀ., 30 ರಂದು 20.4 ಮಿ.ಮೀ., 31 ರಂದು 32.4 ಮಿ.ಮೀ., ಜೂ.1 ರಂದು 0.5 ಮಿ.ಮೀ. ಮಳೆಯಾಗುವ ನಿರೀಕ್ಷೆ ಇದೆ. ಹುಣಸೂರು ತಾಲೂಕಿನಲ್ಲಿ ಮೇ 29 ರಂದು 7 ಮಿ.ಮೀ., 30 ರಂದು 18.5 ಮಿ.ಮೀ., 31ರಂದು 19.7 ಮಿ.ಮೀ., ಜೂ.1 ರಂದು 0.6 ಮಿ.ಮೀ., ಕೆ.ಆರ್. ನಗರದಲ್ಲಿ ಮೇ 29 ರಂದು 4.6 ಮಿ.ಮೀ., 30 ರಂದು 14.2 ಮಿ.ಮೀ., 31 ರಂದು 7.6 ಮಿ.ಮೀ., ಜೂ.1 ರಂದು 0.6 ಮಿ.ಮೀ., ಮೈಸೂರಿನಲ್ಲಿ ಮೇ 29 ರಂದು 2.8 ಮಿ.ಮೀ., 30 ರಂದು 12.4 ಮಿ.ಮೀ., 31 ರಂದು 12.2 ಮಿ.ಮೀ., ಜೂ.1 ರಂದು 0.3 ಮಿ.ಮೀ., ನಂಜನಗೂಡಿನಲ್ಲಿ ಮೇ 29 ರಂದು 3.7 ಮಿ.ಮೀ., 30 ರಂದು 15.5 ಮಿ.ಮೀ., 31 ರಂದು 26.9 ಮಿ.ಮೀ., ಜೂ.1 ರಂದು 0.3 ಮಿ.ಮೀ., ಪಿರಿಯಾಪಟ್ಟಣದಲ್ಲಿ ಮೇ 29 ರಂದು 13.2 ಮಿ.ಮೀ., 30 ರಂದು 30.9 ಮಿ.ಮೀ., 31 ರಂದು 21.1 ಮಿ.ಮೀ., ಜೂ.1 ರಂದು 2.1 ಮಿ.ಮೀ., ತಿ.ನರಸೀಪುರದಲ್ಲಿ ಮೇ 29 ರಂದು 1.7 ಮಿ.ಮೀ., 30 ರಂದು 6.6 ಮಿ.ಮೀ., 31 ರಂದು 10.1 ಮಿ.ಮೀ., ಜೂ.1 ರಂದು 0.1 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ.