ಬಸನಗೌಡ ಪಾಟೀಲ ಯತ್ನಾಳ, ಶಾಸಕ  
ಜಿಲ್ಲೆ

ಲಾಹೋರ್​ನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತೇವೆ

ಮರಿದೇವ ಹೂಗಾರ

ಹುಬ್ಬಳ್ಳಿ: ‘ನರೇಂದ್ರ ಮೋದಿ ಅವರು 2024ರಲ್ಲಿ ಪ್ರಧಾನಿ ಆಗುತ್ತಾರೆ. ಆಗ ನಾವು ಪಾಕಿಸ್ತಾನದ ಲಾಹೋರ್​ನಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುತ್ತೇವೆ. ನಮ್ಮ ದೇಶದಲ್ಲಿ ರಾಷ್ಟ್ರಧ್ವಜ ಹಾರಿಸಲು ಈ ಮಕ್ಕಳ ಅನುಮತಿ ಬೇಕಂತೆ’ ? ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿಕಾರಿದರು.

ನಗರದ ಚನ್ನಮ್ಮ ಮೈದಾನ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಗೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ನಾವು ಚಂದ್ರನ ಮೇಲೆ ರಾಷ್ಟ್ರಧ್ವಜ ಹಾರಿಸಿ ಬಂದಿದ್ದೇವೆ. ಚನ್ನಮ್ಮ ಮೈದಾನದಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡುತ್ತೇವೆ ಎಂದರು.

ಪಾಕಿಸ್ತಾನದಲ್ಲಿ ತಿನ್ನಲು ಅನ್ನ ಇಲ್ಲ. ಇಲ್ಲಿಯವರು ಪಾಕಿಸ್ತಾನ ಜಿಂದಾಬಾದ್ ಎನ್ನುತ್ತಾರೆ. ಅಲ್ಲಿಯವರು ಮೋದಿಯಂಥವರು ನಮ್ಮ ದೇಶಕ್ಕೆ ಪ್ರಧಾನಿ ಆಗಲಿ ಎನ್ನುತ್ತಿದ್ದಾರೆ. ಮೋದಿ ಅವರು ಇನ್ನೊಮ್ಮೆ ಪ್ರಧಾನಿ ಆಗುತ್ತಾರೆ. ಪಾಕಿಸ್ತಾನ ದಾಟಿ ಅಪಘಾನಿಸ್ತಾನ ಬಾರ್ಡರ್​ವರೆಗೆ ಹೋಗುತ್ತೇವೆ ಎಂದರು.

ಚನ್ನಮ್ಮ ಮೈದಾನಕ್ಕೆ ಈದ್ಗಾ ಮೈದಾನವೆಂದರೆ ಸಾಬರಿಗೆ ಜನಿಸಿದಂತೆ. ಕೆಲವರು ಸನಾತನ ಧರ್ಮವನ್ನು ವಿವಿಧ ರೋಗಗಳಿಗೆ ಹೋಲಿಸುತ್ತಿದ್ದಾರೆ. ಸನಾತನ ಧರ್ಮ ವಿರೋಧಿಸುವವರಿಗೆ ಏಡ್ಸ್ ಬರುತ್ತದೆ. ನರೇಂದ್ರ ಮೋದಿ ಅವರನ್ನು ವಿರೋಧಿಸುವವರು ದೇಶದ್ರೋಹಿಗಳು. ಮೋದಿ ಪ್ರಧಾನಿ ಆಗಿದ್ದರಿಂದ ನಮ್ಮ ದೇಶ ಶಾಂತವಾಗಿದೆ. ವಿಘ್ನಗಳು ನಿವಾರಣೆಯಾಗಲಿ ಎಂದು ಗಣೇಶ ಹಬ್ಬದ ದಿನದಂದು ಹೊಸ ಸಂಸತ್​ನಲ್ಲಿ ಮೋದಿ ಅಧಿವೇಶನ ಮಾಡುತ್ತಿದ್ದಾರೆ ಎಂದರು.

ಹುಬ್ಬಳ್ಳಿಯ ಚನ್ನಮ್ಮ ಮೈದಾನ ಯಾರಪ್ಪನ ಆಸ್ತಿಯಲ್ಲ. ಅಂಜುಮನ್ ಆಸ್ತಿ ಅಲ್ಲ, ಪಾಕಿಸ್ತಾನದ ಆಸ್ತಿ ಅಲ್ಲ. ಅಂಜುಮನ್ ಸಂಸ್ಥೆಯವರು ಈ ಮೈದಾನದಲ್ಲಿ ಶೋಕಾಚರಣೆ ಮಾಡಿದರೆ, ನಾವು ಗೋಮೂತ್ರ ಸಿಂಪಡಿಸಿ ಹನುಮಾನ್ ಚಾಲೀಸ ಪಠಣ ಮಾಡುತ್ತೇವೆ. ರಾಜ್ಯದ ವಕ್ಪ್ ಆಸ್ತಿ ಸರ್ಕಾರದ ವಶಕ್ಕೆ ಪಡೆಯಲು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದೇನೆ ಎಂದರು.

ಶೆಟ್ಟರ್ ವಿರುದ್ಧ ವಾಗ್ದಾಳಿ: ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು. ಅದೂ ಪ್ರಲ್ಹಾದ ಜೋಶಿ ಅವರ ವಿರುದ್ಧ. ನಿಮಗೆ ಜನ ಲಗಾ ಹೊಡಿಸುತ್ತಾರೆ. ವಿಧಾನಸಭೆ ಚುನಾವಣೆಯಲ್ಲಿ 35 ಸಾವಿರ ಮತಗಳ ಅಂತರದಿಂದ ಸೋತಿದ್ದೀರಿ. ಎಂಪಿ ಚುನಾವಣೆಯಲ್ಲಿ ಮೂರೂವರೆ ಲಕ್ಷಗಳ ಅಂತರದಿಂದ ಸೋಲುತ್ತೀರಿ ಎಂದು ಶೆಟ್ಟರ್ ವಿರುದ್ಧ ಯತ್ನಾಳ ವಾಗ್ದಾಳಿ ನಡೆಸಿದರು.