ಗುಳೇದಗುಡ್ಡ ಪಟ್ಟಣದ ಚೌಬಜಾರದಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡ ಗಜಾನನೋತ್ಸವ ಸಮಿತಿ ಸುವರ್ಣ ಮಹೋತ್ಸವ ಸಮಾರಂಭವನ್ನು ಹೊಳಬಸು ಶೆಟ್ಟರ ಉದ್ಘಾಟಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ಮಹಾಂತೇಶ ಚಿಂದಿ, ಆನಂದ ತಿಪ್ಪಾ, ಮುತ್ತು ಕರನಂದಿ, ನಿರಂಜನ ಬರಗುಂಡಿ, ಮುತ್ತು ವಸದ, ಶೇಖಣ್ಣ ಹರವಿ, ಮುತ್ತು ಮೊರಬದ ಇದ್ದರು. 
ಜಿಲ್ಲೆ

ನಮ್ಮ ಸಂಸ್ಕೃತಿ ಸಂಪ್ರದಾಯ ಬೆಳೆಸಬೇಕು

ಗುಳೇದಗುಡ್ಡ: ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯುವ ಪೀಳಿಗೆಗೆ ಜಾಗೃತಿ ಮೂಡಿಸಬೇಕು ಎಂದು ಉದ್ಯಮಿ ಹೊಳಬಸು ಶೆಟ್ಟರ ಹೇಳಿದರು.

ಪಟ್ಟಣದ ಚೌಬಜಾರದಲ್ಲಿ ಶನಿವಾರ ರಾತ್ರಿ ಗಜಾನನೋತ್ಸವ ಸಮಿತಿ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ತತ್ವ ಜನಪದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ನಮ್ಮ ಸಂಸ್ಕೃತಿ, ಪರಂಪರೆ ಕಣ್ಮರೆಯಾಗುತ್ತಿವೆ. ಇಂತಹ ಕಲೆ, ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ನಮ್ಮ ಯುವಕರು ಮಾಡಬೇಕು ಎಂದರು.

ತತ್ವ ಜನಪದ ಕಾರ್ಯಕ್ರಮದಲ್ಲಿ ಬಸವರಾಜ ಸಿಂದಗಿಮಠ, ವೈಷ್ಣವಿ ಗೂಳಿ, ಪವಿತ್ರಾ ಜಕ್ಕಪ್ಪನವರ, ಭೀಮಸಿಂಗ್ ರಾಠೋಡ ಬಸವರಾಜ ದಿಂಡಿ, ಶಂಕರ ಬಸೂದೆ, ಶ್ರೀಧರ ವಂದಾಲ, ಪ್ರಕಾಶ ರೇವಡಿ, ಬಸವರಾಜ ಜಿಡಗಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ಮಹಾಂತೇಶ ಚಿಂದಿ, ಆನಂದ ತಿಪ್ಪಾ, ಮುತ್ತು ಕರನಂದಿ, ನಿರಂಜನ ಬರಗುಂಡಿ, ಮುತ್ತು ವಸದ, ಶೇಖಣ್ಣ ಹರವಿ, ಮುತ್ತು ಮೊರಬದ, ಪ್ರದೀಪ ಕಾಂಚಾಣಿ, ಮಲ್ಲು ಹಡಗಲಿ ಇತರರು ಇದ್ದರು.