ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ವಿಚಾರ ಕುರಿತು ಪ್ರಸಚಿವರಾದ ಕೆ.ವೆಂಕಟೇಶ್, ಡಾ.ಎಚ್.ಸಿ.ಮಹದೇವಪ್ಪ ಪ್ರತಿಕ್ರಿಯಿಸಿದ್ದಾರೆ
ನಾವ್ಯಾರು ಬದಲಾವಣೆ ಮಾಡಬೇಕೆಂದು ಕೇಳಿಲ್ಲ. ಇರೋದ್ರಲ್ಲಿ ಇಬ್ಬರಿಗೂ ತೃಪ್ತಿ ಇದೆ. ಇಬ್ಬರು ಒಟ್ಟಾಗಿ ಕೆಲಸ ಮಾಡುತ್ತಿದ್ದು, ನಮ್ಮಲ್ಲಿ ಪೈಪೋಟಿ ಇಲ್ಲ. ಬದಲಾವಣೆ ವಿಚಾರ ಹೈಕಮಾಂಡ್‌ಗೆ ಬಿಟ್ಟದ್ದು ಎಂದು ಸಚಿವದ್ವಯರು ಸ್ಪಷ್ಟನೆ ನೀಡಿದರು.
ಪಿರಿಯಾಪಟ್ಟಣದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅತಿವೃಷ್ಟಿ ವೀಕ್ಷಣೆ ವಿಚಾರದ ಕುರಿತು ಮಾತನಾಡಿದ ಸಚಿವ ಕೆ.ವೆಂಕಟೇಶ್, ನಾನು ಆ ಕ್ಷೇತ್ರದ ಶಾಸಕ. ನನ್ನ ಕ್ಷೇತ್ರದಲ್ಲಿ ತೊಂದರೆ ಆದಾಗ ಸಮಸ್ಯೆ ಬಗೆಹರಿಸೋದು ನನ್ನ ಜವಾಬ್ದಾರಿ.
ಕುಮಾರಸ್ವಾಮಿ ಬರೋದಕ್ಕೂ ನನಗೂ ಏನು ಸಂಬಂಧ. ಅವರು ವೈಯಕ್ತಿಕವಾಗಿ ಮಹಿಳೆಗೆ ಸಹಾಯ ಮಾಡಿರಬಹುದು. ಆದರೆ, ಸರ್ಕಾರದಿಂದ ಕೊಡಿಸಲಿಕ್ಕೆ ಆಗುತ್ತದೆಯೇ ಎಂದರು.