ಜಿಲ್ಲೆ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವೀ ಕೇರ್ ವೈದ್ಯಕೀಯ ಶಿಬಿರ

ಬೆಂಗಳೂರು : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೆಲಸ ಮಾಡುವ ಅರಣ್ಯ ಇಲಾಖೆಯ ಸಿಬ್ಬಂದಿಗಳ ಆರೋಗ್ಯ ತಪಾಸಣೆ ಮತ್ತು ಉಚಿತ ಔಷಧಿ ವಿತರಿಸಲು ವಿವಿಧ ಸಂಘಟನೆಗಳು ವೀ ಕೇರ್ ವೈದ್ಯಕೀಯ ಶಿಬಿರವನ್ನು ನಡೆಸಿದವು.

ಸದಾ ಕಾಡಿನಲ್ಲಿದ್ದು ಕೆಲಸ ಮಾಡುವ ಮೂಲಕ ಅಪಾಯಯುತ ಜೀವನ ನಡೆಸುವ ಅರಣ್ಯ ಇಲಾಖೆಯ ಮೊದಲ ಸಾಲಿನ ಉದ್ಯೋಗಿಗಳನ್ನು ಗಮನದಲ್ಲಿರಿಸಿಕೊಂಡು ಬೆಂಗಳೂರಿನ ಫ್ರೆಂಡ್ಸ್ ಆಫ್ ವೈಲ್ಡ್ಲ್ೈ ಅಸೋಸಿಯೇಷನ್, ಟ್ರಾನ್ಸ್ಫಾರ್ಮಿಂಗ್ ಟುಮಾರೋ ಫೌಂಡೇಶನ್, ದಿ ಆಕ್ಸೃ್ಫರ್ಡ್ ಡೆಂಟಲ್ ಕಾಲೇಜು ಮತ್ತು ಜೆ.ಪಿ.ನಗರದ ರೋಟಾರಾಕ್ಟೃ್ ಕ್ಲಬ್ ಸಹಯೋಗದಲ್ಲಿ ನಡೆದ ಎರಡು ದಿನಗಳ ಶಿಬಿರದಲ್ಲಿ ಸುಮಾರು 200ಕ್ಕೂ ಹೆಚ್ಚು ಉದ್ಯೋಗಿಗಳು ತಪಾಸಣೆಗೊಳಗಾದರು.

ಬಿ.ಪಿ. ಶುಗರ್, ಇಸಿಜಿ, ಕಣ್ಣಿನ ಪರೀಕ್ಷೆ, ದಂತ ಪರೀಕ್ಷೆಯನ್ನು ನಡೆಸಿ ನಂತರ ಪತ್ತೆಯಾದ ಹಲವು ಆರೋಗ್ಯ ಸಮಸ್ಯೆಗಳಿಗೆ ಉಚಿತ ಔಷಧಿಗಳನ್ನು ವಿತರಿಸಲಾಯಿತು. ಕಾಡು ಮತ್ತು ಕಾಡು ಪ್ರಾಣಿಗಳ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕರ್ತವ್ಯ ಸಲ್ಲಿಸುವ ಅರಣ್ಯ ಸಿಬ್ಬಂದಿಗಳ ಆರೋಗ್ಯ ರಕ್ಷಣೆ ನಮ್ಮ ಹೊಣೆ ಎಂಬ ಪರಿಕಲ್ಪನೆಯಲ್ಲಿ ವಿವಿಧ ಸಂಘಟನೆಗಳು ಸೇರಿ ಈ ಶಿಬಿರವನ್ನು ಆಯೋಜಿಸಿದ್ದವು.