ರಬಕವಿ-ಬನಹಟ್ಟಿ: ಭಾರತೀಯ ಸಂಸ್ಕೃತಿಯ ಪರಂಪರೆಗಳಾದ ಹಬ್ಬಗಳಿಂದ ನಾವೆಲ್ಲರೂ ಒಂದುಗೂಡಲು ಸಾಧ್ಯ ಎಂದು ಸಿಪಿಐ ಐ.ಎಂ. ಮಠಪತಿ ತಿಳಿಸಿದರು.
ಬನಹಟ್ಟಿ ಪೊಲೀಸ್ ಠಾಣೆ ಆವರಣದಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಭಾನುವಾರ ನಡೆದ ಶಾಂತಿ ಪಾಲನಾ ಸಭೆಯಲ್ಲಿ ಅವರು ಮಾತನಾಡಿದರು.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು.
ಸಮಾಜದಲ್ಲಿ ಶಾಂತಿ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಹಬ್ಬಗಳ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸಂದೇಶಗಳನ್ನು ಹಾಕುವುದು ಬೇಡ. ಇವುಗಳ ಬಗ್ಗೆ ಹಿರಿಯರು ಮತ್ತು ಪಾಲಕರು ತಮ್ಮ ಯುವಕರತ್ತ ಗಮನ ನೀಡಬೇಕೆಂದು ತಿಳಿಸಿದರು.
ನಾವೆಲ್ಲರೂ ಹಬ್ಬಗಳನ್ನು ಶಾಂತಿಯುತವಾಗಿ ಬೇರೆಯವರಿಗೆ ಯಾವುದೇ ತೊಂದರೆ ಆಗದಂತೆ ಆಚರಿಸಬೇಕು ಎಂದರು.
ಹಿರಿಯರಾದ ಶ್ರೀಶೈಲ ಧಬಾಡಿ, ಸಿದ್ದನಗೌಡ ಪಾಟೀಲ, ಮುಸ್ಲಿಂ ಮುಖಂಡರಾದ ಡಾ. ಅಕ್ಬರ್ ತಾಂಬೋಳಿ, ಹಾರೂನ್ ಬೇವೂರ ಮಾತನಾಡಿದರು.
ಪಿಎಸ್‌ಐ ಬಸವರಾಜ ಯದ್ದಲಗುಡ್ಡ, ರಾಜಶೇಖರ ಮಾಲಾಪುರ, ದಾನಪ್ಪ ಹುಲಜತ್ತಿ, ವಿರೂಪಾಕ್ಷಯ್ಯ ಮಠದ, ಪ್ರಕಾಶ ಸಿಂಗನ್, ಶಿವಾನಂದ ಕುಳ್ಳಿ, ಅಯ್ಯೂಬ್‌ಖಾನ್ ಹೊರಟ್ಟಿ, ಫೀರಸಾಬ್ ನದಾಫ್, ಬುಡಾನ್ ಜಮಾದಾರ, ಆನಂದ ಕೋಲೂರ ಇತರರಿದ್ದರು.