ಜಿಲ್ಲೆ

ಮಳೆಗಾಗಿ ಕಾಯುತ್ತಿದ್ದೇವೆ

ಧಾರವಾಡ: ಸದ್ಯದ ಪರಿಸ್ಥಿತಿಯಲ್ಲಿ ಮತ್ತೆ ಮಳೆ ಬರುವುದು ಕಷ್ಟಕರ. ನಾವು ಸಹ ಮಳೆಯನ್ನೇ ಕಾಯುತ್ತಿದ್ದೇವೆ. ಪ್ರಕೃತಿ ನಿಯಮಕ್ಕೆ ಯÁರೂ ಏನು ಮÁಡಲು ಆಗುವುದಿಲ್ಲ ಎಂದು ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಬಂದರೆ ಏನು ಮÁಡಬೇಕು, ಬಾರದಿದ್ದರೆ ಏನು ಮÁಡಬೇಕು ಎಂದು ಸರ್ಕಾರ ಚಿಂತನೆ ನಡೆಸಿದೆ. ಎರಡೂ ಪರಿಸ್ಥಿತಿಗೆ ಅನುಗುಣವಾಗಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.
ಎರಡೂವರೆ ವರ್ಷಗಳ ಬಳಿಕ ಸಿಎಂ, ಡಿಸಿಎಂ ಬದಲಾವಣೆ ಕುರಿತು ಮುನಿಯಪ್ಪ ಏನು ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಆ ಬಗ್ಗೆ ಅವರನ್ನೇ ಕೇಳಬೇಕು ಎಂದರು. ಕಳೆದ ವರ್ಷದ ಬೆಳೆ ವಿಮೆ ಪರಿಹಾರ ಬಂದಿಲ್ಲ. ಈ ಸಲ ಬೆಳೆ ವಿಮೆ ಸಮೀಕ್ಷೆ ಪ್ರಮÁಣ ಹೆಚ್ಚಿಸಲು ಪ್ರಯತ್ನಿಸುತ್ತಿದ್ದೇವೆ ಎಂದರು.