ಜಿಲ್ಲೆ

'ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ನಾವು ಗಂಭೀರವಾಗಿ ಪರಿಗಣಿಸಿಲ್ಲ'

ಬೆಂಗಳೂರು: ರಾಜ್ಯದ 6 ಸಚಿವರು ತೇಜೋವಧೆಯ‌ ಷಡ್ಯಂತ್ರದಿಂದ ಪಾರಾಗಲು ಕೋರ್ಟ್​​ಗೆ ಹೋಗಿದ್ದರಲ್ಲಿ ತಪ್ಪೇನಿಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.

ಕುಮಾರ ಕೃಪಾ ಅತಿಥಿ ಗೃಹದಲ್ಲಿ ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋರ್ಟನಿಂದ ಸಚಿವರು ತಡೆಯಾಜ್ಞೆ ತಂದರೆ ಕಾಂಗ್ರೆಸ್​ಗೆ ಏನು ಸಮಸ್ಯೆ ಎಂಬುದು ಅರ್ಥವಾಗದು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ವ್ಯವಸ್ಥಿತ ಪಿತೂರಿಯಿದೆ. ಆದರೂ ಅರೋಪ ಕೇಳಿ ಬಂದ 24 ತಾಸಿನಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇಂತಹ ನೈತಿಕ ಹೊಣೆಗಾರಿಕೆ ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಕಾಂಗ್ರೆಸ್ ನಲ್ಲಿ ಇಂತಹದ್ದು ಕಾಣಸಿಗದು ಎಂದರು.

ಯತ್ನಾಳ್ ಮಾತಿಗೆ ಡೋಂಟ್ ಕೇರ್: ಶಾಸಕ ಬಸನಗೌಡ ಪಾಟೀಲ್ ಹೇಳಿಕೆಗಳನ್ನು ನಾವಂತೂ ಗಂಭೀರವಾಗಿ ಪರಿಗಣಿಸಿಲ್ಲ. ಪಕ್ಷದ ಕಾರ್ಯಕರ್ತರಿಗೂ ಇದು ಡೋಂಟ್ ಕೇರ್. ನೀವು (ಮಾಧ್ಯಮದವರು) ಆದ್ಯತೆ ಕೊಡಬೇಡಿ ಎಂದು ಅರುಣ್ ಸಿಂಗ್ ಹೇಳಿದರು.

ಯತ್ನಾಳ್ ವಿರುದ್ಧ ಶಿಸ್ತು ಕ್ತಮದ ಕುರಿತು ನಿರ್ದಿಷ್ಟವಾಗಿ ಯಾವುದೇ ಉತ್ತರ ನೀಡದ ಸಿಂಗ್, ಬಹಿರಂಗ ಹೇಳಿಕೆ ಕೊಡುವುದನ್ನು ನಿಲ್ಲಿಸಲಿ ಎಂದು ಸೂಚಿಸಿದರು.