ಕಡೂರು: ಪ್ರಸಕ್ತ ಸಾಲಿನಲ್ಲಿ ಕಡೂರು ತಾಲೂಕನ್ನು ತೀವ್ರ ಬರಪೀಡಿತ ತಾಲೂಕು ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ರೈತರು ಮಳೆ ಆಶ್ರಿತ ಬೆಳೆಗಳಿಗೆ ಬರ ಸಮೀಕ್ಷೆ ಮಾಹಿತಿ ಆಧಾರಿಸಿ ಎ್ಐಡಿ ಆಧಾರದ ಮೇಲೆ ಪರಿಹಾರ ಪಾವತಿಸಲು ಸರ್ಕಾರ ನಿರ್ಧರಿಸಿದೆ.
ಎ್ಐಡಿಯನ್ನು 2016ನೇ ಸಾಲಿನಿಂದ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಹಾಗೂ ಕಂದಾಯ ಇಲಾಖೆ ಸೇರಿದಂತೆ ಇತರೆ ಇಲಾಖೆಗಳಲ್ಲಿ ಕೃಷಿ ಜಮೀನುಗಳನ್ನು ಮ್ಯಾಪಿಂಗ್ ಮಾಡಿ ನೊಂದಾಯಿಸಲಾಗಿರುತ್ತದೆ ಎಂದು ತಹಸೀಲ್ದಾರ್ ಎಂ.ಪಿ.ಕವಿರಾಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೂರು ಹಂತದಲ್ಲಿ ಪರಿಹಾರ ಪಾವತಿಗೆ ಕ್ರಮ ಕೈಗೊಳ್ಳಲಾಗಿದೆ. ಗ್ರೀನ್ ಲಿಸ್ಟ್ - ರೈತರ ಪಹಣಿ, ದಾಖಲೆ, ಬ್ಯಾಂಕ್ ಖಾತೆ ಹಾಗೂ ಇತರೆ ದಾಖಲೆ ತಾಳೆ ಇರುವಂತಹ ಪ್ರಕರಣಗಳು. ಹೆಸರು ವ್ಯತ್ಯಾಸದ ಪ್ರಕರಣಗಳು- ರೈತರ ಆಧಾರ್‌ನಲ್ಲಿ ಇರುವ ಹೆಸರಿಗೂ, ಪಹಣಿಯಲ್ಲಿ ಇರುವ ಹೆಸರಿಗೂ ಹಾಗೂ ಪರಿಹಾರ ಪಡೆಯ ಬೇಕಾದ ವ್ಯಕ್ತಿ ಹೆಸರಿಗೂ ವ್ಯತ್ಯಾಸ ಇರುವ ಪ್ರಕರಣಗಳನ್ನು ಪರಿಶೀಲಿಸಿ ಪಾವತಿಸಬೇಕಾಗಿರುತ್ತದೆ.
ವಿಸ್ತೀರ್ಣ ವ್ಯತ್ಯಾಸ-ರೈತರ ಪಹಣಿ ವಿಸ್ತೀರ್ಣ ಹಾಗೂ ಎ್ಐಡಿ ನೊಂದಣಿ ಪ್ರಕರಣಗಳಲ್ಲಿ ವ್ಯತ್ಯಾಸ ಇರುವಂತಹ ಪ್ರಕರಣಗಳು ಪರಿಶೀಲಿಸಬೇಕಿರುತ್ತದೆ. ಈ ಮೇಲಿನ ಮೂರು ಅಂಶಗಳಿಗೆ ಸಂಬಂದಿಸಿದಂತೆ ಕಡೂರು ತಾಲೂಕಿನಲ್ಲಿ ಒಟ್ಟು 67,639 ಪ್ರಕರಣಗಳನ್ನು ಜ.14 ರೊಳಗೆ ಪರಿಶೀಲಿಸಿ ಪರಿಹಾರದ ಮೊತ್ತವನ್ನು ಪಾವತಿಸಲು ಕ್ರಮವಹಿಸಬೇಕಿರುತ್ತದೆ. ಈ ಹಿನ್ನಲೆಯಲ್ಲಿ ಕನಿಷ್ಠ ಕಾಲಮಿತಿಯೊಳಗೆ ಪರಿಶೀಲಿಸಬೇಕಿರುವುದರಿಂದ ರೈತರು ತುರ್ತಾಗಿ ತಮ್ಮ ಕೃಷಿ ಜಮೀನು ಯಾವ ಗ್ರಾಮದ ವ್ಯಾಪ್ತಿಗೆ ಒಳಪಟ್ಟಿದೆ ಆ ಗ್ರಾಮಗಳ ಗ್ರಾಮ ಆಡಳಿತ ಅಧಿಕಾರಿಗಳನ್ನು ಸಂಪರ್ಕಿಸಿ ವಿವರಗಳನ್ನು ಪರಿಶೀಲಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಈಗಾಗಲೇ ಎ್ಐಡಿ ನೊಂದಾಯಿಸಲಾದ ಪ್ರಕರಣಗಳ ಮಾಹಿತಿಯನ್ನು ತಾಲೂಕಿನ ಎಲ್ಲ ಗ್ರಾಪಂ, ತಾಲ್ಲೂಕು ಕಚೇರಿ, ನಾಡಕಚೇರಿ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿಯಲ್ಲಿ ಪ್ರಚಾರ ಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಬೆಳೆ ಪರಿಹಾರದ ಮೊತ್ತವನ್ನು ಎ್ಐಡಿ ಗೆ ನೊಂದಾಯಿಸಿದ ವ್ಯಕ್ತಿ ವಿವರಗಳಿಗೆ ಮ್ಯಾಪ್ ಅಗಿರುವ ಸರ್ವೇ ನಂಬರ್ ಆಧರಿಸಿ ಪರಿಹಾರ ಪಾವತಿಸಲಾಗುವುದರಿಂದ ಕಡ್ಡಾಯವಾಗಿ ರೈತರು ತಮ್ಮ ಖಾತೆ ಜಮೀನು ತಮ್ಮದೇ ಎ್ಐಡಿಗೆ ನೋಂದಣಿಯಾಗಿದೆ ಎಂಬುದನ್ನು ಪರಿಶೀಲಿಸಿಕೊಳ್ಳ ಬೇಕು ಎಂದು ತಿಳಿಸಿದ್ದಾರೆ.
ಒಂದು ವೇಳೆ ರೈತರ ಖಾತೆ ಜಮೀನು ತಪ್ಪಾಗಿ ಬೇರೆ ವ್ಯಕ್ತಿಯ ಎ್ಐಡಿ ನೋಂದಣಿಯಾಗಿದ್ದಲ್ಲಿ ಜ.14ರ ಬೆಳ್ಳಗೆ 11 ಗಂಟೆ ಒಳಗಾಗಿ ಸಂಬಂಧಿಸಿದ ಗ್ರಾಮ ಆಡಳಿತ ಅಧಿಕಾರಿಗೆ ಲಿಖಿತ ಆಕ್ಷೇಪಣಿ ಸಲ್ಲಿಸಬೇಕಿದೆ. ಒಂದು ವೇಳೆ ನಿಗದಿತ ಅವಧಿ ಒಳಗೆ ಆಕ್ಷೇಪಣೆ ಸಲ್ಲಿಸದೆ ಬರ ಪರಿಹಾರದ ಮೊತ್ತ ಪಾವತಿಯಾಗದಿದ್ದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಹೊಣೆಗಾರರು ಆಗುವುದಿಲ್ಲ ಎಂದು ತಿಳಿಸಿದ್ದಾರೆ.