ಜಿಲ್ಲೆ

ಸಾಧನೆ ದಾರಿಯಲ್ಲಿ ಬೇಡ ಹಿಂಜರಿಕೆ

Chitradurga

ಚಿತ್ರದುರ್ಗ: ಸಾಧನೆ ದಾರಿಯಲ್ಲಿ ನಡೆಯುವವರು ಹಿಂಜರಿಯಬಾರದು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಂಗವಿಕಲ ವಿದ್ಯಾರ್ಥಿಗ ಳಿಗೆ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿಯಿಂದ ಕೋಟೆ ಶಾಲಾವರಣದಲ್ಲಿ ತಾಲೂಕಿನ 1ರಿಂದ 10 ಹಾಗೂ ಪಿಯುಸಿ ಅಂಗವಿಕಲ ವಿದ್ಯಾರ್ಥಿಗಳಿಗೆ ಶುಕ್ರವಾರ ಆಯೋಜಿಸಿದ್ದ ವೈದ್ಯಕೀಯ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಅಂಗವಿಕಲರ ಬಗ್ಗೆ ಇದ್ದ ತಾತ್ಸಾರ ಮನೋಭಾವ ಬದಲಾಗಿದೆ. ನೂರಾರು ಅಂಗವಿಕಲರು ಐಎಎಸ್ ಅಧಿಕಾರಿಗಳಾಗಿದ್ದಾರೆ. ವಿಜ್ಞಾನಿ, ವರ್ತಕರು, ಉದ್ಯಮಿ, ಶಿಕ್ಷಕ, ಬ್ಯಾಂಕ್ ಮತ್ತಿತರ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಅಂಗವಿಕಲ ಮಕ್ಕಳು ಸರ್ಕಾರ ಒದಗಿಸುತ್ತ್ತಿರುವ ಸೌಲಭ್ಯಗಳನ್ನು ಬಳಸಿಕೊಂಡು ಹೆಚ್ಚಿನ ಸಾಧನೆ ಮಾಡಬೇಕು. ಪಾಲಕರು, ಪೋಷಕರು ಕೂಡ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.

ಕುರಬರಹಳ್ಳಿ ಶಾಲೆಯ ಅಂಧ ಬಾಲಕಿ ರಕ್ಷಾಳಿಗೆ ಮೈಸೂರಲ್ಲಿ ಗಾಯನ ತರಬೇತಿ ಕೊಡಿಸಲು ಹಾಗೂ ಲ್ಯಾಪ್‌ಟಾಪ್ ಮತ್ತಿತರ ಉಪಕರಣಗಳನ್ನು ಒದಗಿಸುವ ಭರವಸೆ ನೀಡಿದರು.

ಬಿಇಒ ತಿಪ್ಪೇಸ್ವಾಮಿ ಮಾತನಾಡಿ, ತಾಲೂಕಿನಲ್ಲಿ 740 ಅಂಗವಿಕಲ ಮಕ್ಕಳ ಪೈಕಿ 40 ಗೃಹಧಾರಿತ ಹಾಗೂ 46 ಮಕ್ಕಳು ಶಾಲಾಧಾರಿತ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ತಜ್ಞ ವೈದ್ಯರಾದಡಾ ಡಾ.ಪ್ರದೀಪ್, ಡಾ.ಅಭಿಜಿತ್, ಎ.ಮಂಜುನಾಥ್, ಅಭಿಷೇಕ್, ಮಂಜುನಾಥ್, ಮುಖ್ಯಶಿಕ್ಷಕಿ ಸೌಮ್ಯಾ, ತಿಮ್ಮಾರೆಡ್ಡಿ, ಬಿಆರ್‌ಸಿ ಸಂಪತ್‌ಕುಮಾರ್ ಮತ್ತಿತರರು ಇದ್ದರು.