Send off to Neeruganti Ramegowda  
ಜಿಲ್ಲೆ

ನಿವೃತ್ತ ನೀರುಗಂಟಿಗೆ ಸಿ.ಕೆ.ರಾಮೇಗೌಡಗೆ ಬೀಳ್ಗೊಡುಗೆ

ಎ. ಆರ್. ರಘುರಾಮ

ಸಾಲಿಗ್ರಾಮ : ಗ್ರಾಮಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಕೆಲಸ ನಿರ್ವಹಿಸುತ್ತಿರುವ ನೀರುಗಂಟಿಗಳಿಗೆ ಸರ್ಕಾರ ಕನಿಷ್ಠ ವೇತನವನ್ನು ಸರ್ಕಾರ 20 ಸಾವಿರ ರೂ. ಗಳಿಗೆ ಹೆಚ್ಚಿಸಿ, ಜೀವನಕ್ಕೆ ಭದ್ರತೆ ನೀಡಬೇಕು ಎಂದು ಕುಪ್ಪೆ ಗ್ರಾ.ಪಂ. ಅಧ್ಯಕ್ಷೆ ಸವಿತಾ ಹೇಳಿದರು.
ಕುಪ್ಪೆ ಗ್ರಾಪಂ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಚಿಕ್ಕಕೊಪ್ಪಲು ಗ್ರಾಮದ ನೀರುಗಂಟಿ
ಯಾಗಿ 30 ವಷ ಸೇವೆ ಸಲ್ಲಿಸಿ ನಿವೃತ್ತಿಯಾದ ಸಿ.ಕೆ.ರಾಮೇಗೌಡ ಅವರಿಗೆ ಸನ್ಮಾನಿಸಿ ಮಾತನಾಡಿದರು
ಕುಡಿಯುವ ನೀರು, ಬೀದಿ ದೀಪದ ನಿರ್ವಹಣೆ ಮತ್ತು ಕಂದಾಯ ವಸೂಲಿಗೆ ಸಹಕಾರ ಸೇರಿದಂತೆ ಗ್ರಾಮಗಳ ಮೂಲ ಸೌಕರ್ಯ ಕಲ್ಪಸುವಲ್ಲಿ ನೀರುಗಂಟಿಗಳ ಸೇವೆ ಅಪಾರವಾಗಿದ್ದು ಎಂದರು.ರಾಮೇಗೌಡ ಕಳೆದ 30ವರ್ಷಗಳಿಂದ ತಮ್ಮ ಗ್ರಾಮದಲ್ಲಿ ಯಾವುದೇ ಸಮಸ್ಯೆ ಬಾರದಂತೆ ಕೆಲಸ ನಿರ್ವಹಿಸಿದ್ದಾರೆ. ಇವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದರು. ಗ್ರಾಪಂ ಉಪಾಧ್ಯಕ್ಷೆ ಗೀತಾ, ಸದಸ್ಯರಾದ ಸಿ.ಬಿ.ಧರ್ಮ, ಗಣೇಶ, ರೇಖಾೆ, ಮುಖಂಡರಾದ ಮಹೇಂದ್ರ, ಮಹೇಶ್, ಪಿಡಿಒ ಯೋಗಾನಂದ, ಕಾರ್ಯದರ್ಶಿ ಸಿದ್ದರಾಜು, ಬಿಲ್ ಕಲೆಕ್ಟರ್ ನಾಗರಾಜು ಇದ್ದರು.