ಜಿಲ್ಲೆ

ಶೀಘ್ರದಲ್ಲೇ ಯರಗೋಳು ಡ್ಯಾಂ ಲೋಕಾರ್ಪಣೆ: ಜಲ ಮಂಡಳಿ ಅಧಿಕಾರಿಗಳಿಂದ ಕೊನೆಯ ಹಂತದ ಪರಿಶೀಲನೆ

ಕೋಲಾರ: ಈ ವರ್ಷ ಉತ್ತಮ ಮಳೆಯಾಗುತ್ತಿದ್ದು, ಮುಂಗಾರು ಪ್ರವೇಶ ಮುನ್ನವೇ ಭರ್ತಿಯಾಗಿರುವ ಡ್ಯಾಂ ವೀಕ್ಷಿಸಲು ಜಲಮಂಡಳಿ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಡ್ಯಾಂ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ‌ ಯರಗೋಳ್ ಬಳಿಯಿರುವ ಕಾಮಗಾರಿ ಪೂರ್ಣಗೊಂಡಿದ್ದು.‌ಜೊತೆಗೆ‌ ನೀರು ತುಂಬಿರುವುದರಿಂದ ಪರಿಶೀಲನೆ ನಡೆಸಿದರು.

ಬೆಂಗಳೂರು ಜಲಮಂಡಳಿಯ ಇಂಜಿನಿಯರ್ ಮತ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದ್ದು, ಇದರಿಂದಲೇ 3 ತಾಲೂಕು ಮತ್ತು 48 ಹಳ್ಳಿಗಳಿಗೆ ಕುಡಿಯುವ ನೀರು ಕಲ್ಪಿಸಲಾಗುವುದು.

ಸುಮಾರು 280 ಕೋಟಿ ವೆಚ್ಚದಲ್ಲಿ ಈ ಡ್ಯಾಂ ನಿರ್ಮಾಣವಾಗಿದ್ದು, ಸದ್ಯದಲ್ಲಿ ಲೋಕಾರ್ಪಣೆ ಯಾಗುವ ಹಿನ್ನೆಲಯಲ್ಲಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. (ದಿಗ್ವಿಜಯ ನ್ಯೂಸ್​)