ಬೆಳಗಾವಿ: ಹೆಸ್ಕಾಂನಿಂದ ಮೇಲಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವುದರಿಂದ ಹಿಡಕಲ್ ನಿಂದ
ಬೆಳಗಾವಿ ನಗರಕ್ಕೆ ಸರಬರಾಜು ಆಗುವ ಸುಮಾರು 20 ವರ್ಷಗಳ ಹಳೆಯ ಕಚ್ಚಾ ನೀರಿನ ಕೊಳವೆಯ ಮೇಲೆ ಒತ್ತಡ ಉಂಟಾಗಿ ಅಂಕಲಗಿ ಹತ್ತಿರದ ಸ್ಕೂರ ವಾಲ್ವ್ ಒಡೆದು ಹೋಗಿದ್ದರಿಂದ ಬೆಳಗಾವಿ ನಗರಕ್ಕೆ 2 ದಿನಗಳವರೆಗೆ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯವಾಗಿತ್ತು. ಈಗ ತುರ್ತು ದುರಸ್ಥಿ ಕಾರ್ಯ 24 ಗಂಟೆಯಲ್ಲಿ ಪೂರ್ಣಗೊಂಡಿದ್ದು, ಈಗಾಗಲೇ ಬೆಳಗಾವಿ ನಗರಕ್ಕೆ ಎಂದಿನಂತೆ ನೀರು ಸರಬರಾಜು ಪ್ರಾರಂಭವಾಗಿದೆ.