ವಿಜಯಪುರ : ನಗರಕ್ಕೆ ಕೊಲ್ಹಾರದ ಶುದ್ಧ ಕುಡಿಯುವ ನೀರಿನ ಟಕದಿಂದ ನೀರು ಸರಬರಾಜು ಆಗುವ ಪ್ರದೇಶಗಳಿಗೆ ಸೆ. 3 ರಂದು ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.ಕೊಲ್ಹಾರ ಮೂಲ ಸ್ಥಾವರದಿಂದ ಜಲನಗರ ಪಂಪಿನ ಮನೆಯವರೆಗೆ ಅಳವಡಿಸಿದ 965/900 ಎಂಎಂ ವ್ಯಾಸದ ಎಂಎಸ್&ಪಿಎಸ್ಸಿ ಮುಖ್ಯ ಏರು ಕೊಳವೆ ಮಾರ್ಗದ ಚೈನೇಜ್ 6.930 ಕಿಮೀ. ಗರಸಂಗಿ ಹಳ್ಳದ ಹತ್ತಿರ 965 ಮಿಮೀ. ವ್ಯಾಸದ ಎಂಎಸ್ ಕೊಳವೆ ಮಾರ್ಗದ ಎಂಎಸ್ ಮ್ಯಾನ್ಹೋಲ್ ಬರ್ಸ್ಟ್ ಆಗಿದ್ದು ಹಾಗೂ ಚೈನೇಜ್ 2.406 ಕಿಮೀ. ರಾಚಣ್ಣ ಗುಡಿ ಹತ್ತಿರ ಚೈನೇಜ್ 9.332 ಕಿಮೀ. ರೋಣಿಹಾಳ ಗ್ರಾಮದ ಹತ್ತಿರ ಚೈನೇಜ್ 13.165 ಕಿಮೀ. ರೋಣಿಹಾಳ ಕೆರೆ ಹತ್ತಿರ ಹಾಗೂ ಚೈನೇಜ 41.290 ಕಿಮೀ. ಬಾರಾಕೋಟರಿ ತಾಂಡಾ ಹತ್ತಿರ ಮತ್ತು ಮೊದಲನೇ ಹಂತದ 450 ಮಿಮೀ. ವ್ಯಾಸದ ಎಂಎಸ್ ಮುಖ್ಯ ಏರು ಕೊಳವೆ ಮಾರ್ಗದ ರಮಜಾನ ಹಳ್ಳ ಬಳೂತಿ ಕ್ರಾಸ್ ಹತ್ತಿರ ನೀರು ಸೋರುವಿಕೆಯ ತುರ್ತು ದುರಸ್ತಿ ಕಾಮಗಾರಿಗಳನ್ನು ಜಲ ಮಂಡಳಿ ವತಿಯಿಂದ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರು ಜಲಮಂಡಳಿಯೊಂದಿಗೆ ಸಹಕರಿಸುವಂತೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.