ರಾಚಯ್ಯ ಸ್ವಾಮಿ ಮಾಚನೂರು
ರಾಯಚೂರು ಕಳೆದ ವರ್ಷ ಸುರಿದ ಧಾರಾಕಾರ ಮಳೆಗೆ ತುಂಗಭದ್ರಾ ಜಲಾಶಯವು ಭರ್ತಿಯಾಗಿದ್ದರಿಂದ ಎರಡು ಹಂಗಾಮಿನ ಬೆಳೆಗೆ ನೀರು ಸಮರ್ಪಕವಾಗಿ ಸಿಗುವುದೆಂಬ ನಿರೀಕ್ಷೆ ಇದೀಗ ಹುಸಿಯಾಗುವ ಲಕ್ಷಣ ಗೋಚರಿಸಿವೆ. ರೈತರು ಬೆಳೆದ ಬೆಳೆಗೆ ಈಗಲೇ ಕಾಲುವೆಯಿಂದ ನೀರು ಸರಿಯಾಗಿ ದೊರೆಯದಿರುವುದು ಎಡದಂಡೆ ಅಚ್ಚುಕಟ್ಟು ವ್ಯಾಪ್ತಿಯ ರೈತಾಪಿ ವರ್ಗದಲ್ಲಿ ಆತಂಕ ಮೂಡಿಸಿದೆ.
ಕಳೆದ ವರ್ಷಕ್ಕಿಂತ ಮೊದಲೇ ಈ ವರ್ಷ ಜಲಾಶಯ ಭರ್ತಿಯಾಗಿತ್ತು. ೧೯ನೇ ಗೇಟï ಕಿತ್ತಿದ್ದರೂ ನೀರು ಕೊರತೆಯಾಗಲಿಲ್ಲ. ಆದರಿಂದ ಎರಡನೇ ಬೆಳೆಗೂ ನೀರು ಸಿಗಲಿದೆ ಎಂದು ಐಸಿಸಿ ಸಭೆ ನಿರ್ಧಾರ ಕೈಗೊಂಡಿದ್ದರಿAದ ರೈತರು ಕೃಷಿಗೆ ಎರಡನೇ ಹಂಗಾಮಿಗೆ ತೊಡಗಿದ್ದು ಈಗ ನೀರಿನ ಅಭಾವ ಮಾರ್ಚ್ ಅಂತ್ಯಕ್ಕೂ ಮೊದಲೇ ಎದುರಾಗಿದೆ. ಏ.೧೦ ರವರೆಗೆ ರೈತರಿಗೆ ನೀರು ಸಿಗುವುದೇ ಅನುಮಾನವಾಗಿದ್ದು, ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನೀಡಿದ ಭರವಸೆ ಮಣ್ಣುಪಾಲಾಗಿದ್ದು,
೬ ಲಕ್ಷ ಎಕರೆ ನೀರಾವರಿ
ತುಂಗಭದ್ರಾ ಎಡದಂಡೆ ಕಾಲುವೆ (ಟಿಎಲ್‌ಬಿಸಿ) ಕೊಪ್ಪಳ ಹಾಗೂ ರಾಯಚೂರು ಜಿ¯್ಲÉಗಳ ರೈತರ ಜೀವನಾಡಿಯಾಗಿದ್ದು, ಮುನಿರಾಬಾದ್‌ನಿಂದ ಆರಂಭಗೊAಡ ಕಾಲುವೆ ರಾಯಚೂರು ತಾಲೂಕಿನ ಕೊನೆ ಭಾಗದವರಿಗೆ ವ್ಯಾಪ್ತಿ ಹೊಂದಿದೆ. ನೀರಾವರಿ ಇಲಾಖೆ ಮಾಹಿತಿಯಂತೆ ೬ ಲಕ್ಷ ಎಕರೆ ನೀರಾವರಿ ಜಮೀನಿದ್ದು, ಇದರಲ್ಲಿ ೨ ಲಕ್ಷಕ್ಕೂ ಹೆಚ್ಚು ಎಕರೆ ಅಕ್ರಮವಾಗಿ ನೀರಾವರಿ ಇದೆ. ಆದರೆ, ಜಿ¯್ಲÉಯ ಜನಪ್ರತಿನಿಽಗಳು ನೀರು ತರಲು ಮುಂದಾಗದೆ ನಿರಾಸಕ್ತಿ ವಹಿಸಿz್ದÁರೆ ಎನ್ನಲಾಗಿದೆ.
ರೈತರಲ್ಲಿಆತಂಕ ಹೆಚ್ಚಳ!
ಮೊದಲ ಬೆಳೆಗೆ ನೀರು ತಡವಾಗಿ ಸಿಕ್ಕಿದ್ದರಿಂದ ರೈತರು ಮೊದಲ ಹಂಗಾಮಿನಲ್ಲಿ ತಡವಾಗಿ ಕಟಾವು ಮಾಡಿ ಕಳೆದ ಜನವರಿಯಲ್ಲಷ್ಟೇ ಎರಡನೇ ಹಂಗಾಮಿನ ಕೃಷಿ ಆರಂಭಿಸಿದ್ದಾರೆ. ಸರ್ಕಾರ ಡ್ಯಾಂನಿAದ ೩೮೦೦ ಕ್ಯೂಸೆಕï ನೀರು ಹರಿ ಬಿಟ್ಟರೂ ಮೈಲï ೪೬ ರಲ್ಲಿ ೨೩೭೫ ಕ್ಯೂಸೆಕ್ ಮಾತ್ರ ನೀರಿದ್ದು, ಮೈಲï ೬೦ ಕ್ಕೆ ೧೨೫೦ ಕ್ಕೆ ಕುಸಿತವಾಗಿ ಮೈಲï ೯೦ ರಲ್ಲಿ ತೀವ್ರ ಕುಸಿತ ಕಾಣುತ್ತಿದೆ. ಮೈಲï ೧೦೪ ರ ಇಲ್ಲಿ ೪೮೯ ಕ್ಯೂಸೆಕ್ ಇರುವುದರಿಂದ ಸಿರವಾರದಲ್ಲಿ ನೀರಿನ ಹರಿವೇ ನಿಂತು ಹೋಗಿದೆ. ಇದರಿಂದ ಕೇಳ ಭಾಗದ ರೈತರು ಭತ್ತ ಬೆಳೆಯುವ ಆಸೆ ಬಿಟ್ಟಿz್ದÁರೆ. ಎಡದಂಡೆ ಕಾಲುವೆ ಮುಖ್ಯ ಮೈಲ್‌ಗಳ ಬಳಿ ನಿಗದಿತ ಗೇಜï ಕಾಯ್ದುಕೊಳ್ಳಲು ನೀರಾವರಿ ನಿಗಮದ ಎಂಜಿನಿಯರ್‌ಗಳು ವಿ-Àಲರಾಗಿz್ದÁರೆ. ಸಮೀಪದ ೬೦ನೇ ಮೈಲï ಬಳಿಯ ಮುಖ್ಯಕಾಲುವೆಯಲ್ಲಿ ೯.೧ ಅಡಿ ನೀರು ಹರಿಯಬೇಕು. ಅದರೆ ಕೇವಲ ೧೨೫೦ ಕ್ಯೂಸೆಕ್ ಮಾತ್ರ ಹರಿಯುತ್ತಿರುವುದರಿಂದ ಕೊನೆ ಭಾಗದ ರೈತರ ಗz್ದÉಗಳಿಗೆ ನೀರು ತಲುಪಿಲ್ಲ.
ನೀರಿನ ಹೋರಾಟ, ಕೆಲವರಿಗೆ ಅಸö!
ಎಡದಂಡೆ ನಾಲೆಯಿಂದ ಕೆಳಭಾಗದ ರೈತರಿಗೆ ನೀರು ಹರಿಸಲು ಒತ್ತಾಯಿಸಿ ನಿರಂತರ ಪಕ್ಷಾತೀತವಾಗಿ ಹೋರಾಟ, ಪ್ರತಿಭಟನೆಗಳು ನಡೆಯುತ್ತಿವೆ. ಕೆಲ ರಾಜಕೀಯ ಪಕ್ಷಗಳ ನಾಯಕರು ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಲು ಅಸöವನ್ನಾಗಿ ಮಾಡಿಕೊಂಡಿದ್ದು ತಿಕ್ಕಾಟ ಹೆಚ್ಚಾಗಿದೆ. ಬಿಜೆಪಿ ನಾಯಕರು ಒಂದು ದಿನ ಹೋರಾಟ ಮಾಡಿದರೆ, ಕಾಂಗ್ರೆಸï ನಾಯಕರು ಮತ್ತೊಂದು ದಿನ ಪ್ರತಿಭಟನೆ ಮಾಡುತ್ತಿz್ದÁರೆ. ರೈತರಿಗೆ ಯಾರ ಜತೆಗೆ ನಾವು ಪ್ರತಿಭಟನೆ ಮಾಡಬೇಕು ಎನ್ನುವ ಗೊಂದಲ ಮೂಡಿದೆ.
ತುಂಗಭದ್ರಾ ಜಲಾಶಯವು ಮಳೆಗಾಲದಲ್ಲಿ ಭರ್ತಿಯಾಗಿದ್ದರು, ಕೆಳ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಮೇಲ್ಬಾಗದಲ್ಲಿ ೨.೫ ಲಕ್ಷ ಎಕರೆ ಆಕ್ರಮ ನೀರಾವರಿ ಇರುವುದರಿಂದ ನಮಗೆ ನೀರು ತಪುಪಿಲ್ಲ. ಸರ್ಕಾರ ಆಕ್ರಮ ನೀರಾವರಿ ಮಾಡುವವವರ ಮೇಲೆ ಕ್ರೀಮಿನಲ್ ಪ್ರಕರಣ ದಾಖಲು ಮಾಡಿದರೆ ಮಾತ್ರ ಕೆಳ ಭಾಗದ ರೈತರಿಗೆ ನೀರು ತಲುಪುತ್ತದೆ.
ಚಾಮರಸ ಮಾಲೀ ಪಾಟೀಲ್ ರಾಜ್ಯ ಗೌರವಾಧ್ಯಕ್ಷರು ರೈತ ಸಂಘ ರಾಯಚೂರು