ಜಿಲ್ಲೆ

ಕದ್ರಾ ಅಣೆಕಟ್ಟೆಯಿಂದ ಮತ್ತೆ ನೀರು ಹೊರಕ್ಕೆ

Uttara Kannada - Subash Hegde

ಕಾರವಾರ: ಜಿಲ್ಲೆಯಲ್ಲಿ ಮಳೆ‌‌ ಮುಂದುವರಿದಿದೆ. ಸಾಕಷ್ಟು ಅನಾಹುತಗಳು ಸಂಭವಿಸುತ್ತಿವೆ. ಮರಗಳು ಕಂಬಗಳ ಮೇಲೆ ಬಿದ್ದು,  ವಿದ್ಯುತ್ ಕಣ್ಣಾಮುಚ್ಚಾಲೆಯಾಡುತ್ತಿದೆ.‌

ಕಾರವಾರದಲ್ಲಿ ಮಳೆ ಕಡಿಮೆಯಾಗಿದೆ. ಕುಮಟಾ,‌ಹೊನ್ನಾವರ, ಭಟ್ಕಳ, ಶಿರಸಿ ಸೇರಿ ವಿವಿಧೆಡೆ ಉತ್ತಮ ಮಳೆಯಾಯಿತು. 

ಅಣೆಕಟ್ಟೆಯಿಂದ ನೀರು ಹೊರಕ್ಕೆ:

ಕದ್ರಾ ಅಣೆಕಟ್ಟೆಯ ವ್ಯಾಪ್ತಿಯಲ್ಲಿ 165 ಮಿಮೀ ಮಳೆಯಾಗಿದೆ. 33432 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರಿಂದ  ಸೋಮವಾರ 4 ಗೇಟ್ ತೆರೆದು 10,600 ಕ್ಯೂಸೆಕ್ ನೀರನ್ನು ಹೊರ ಬಿಡಲಾಯಿತು.

ವಿದ್ಯುತ್ ಉತ್ಪಾದನೆ ಮಾಡಿ 21 ಸಾವಿರ ಕ್ಯೂಸೆಕ್ ನೀರು ಹೊರ ಹೋಗುತ್ತಿದ್ದು, ಒಟ್ಟಾರೆ 31 ಸಾವಿರ ಕ್ಯೂಸೆಕ್  ನೀರು ಹೊರ ಹೋಗುತ್ತಿದೆ.  34.50 ಮೀಟರ್ ಗರಿಷ್ಠ ಸಂಗ್ರಹಣಾ ಸಾಮರ್ಥ್ಯವಿರುವ ಅಣೆಕಟ್ಟೆಯಲ್ಲಿ 31.02 ಮೀಟರ್ ನೀರು ಸಂಗ್ರಹವಾಗಿದೆ. ಶಾಸಕ ಸತೀಶ ಸೈಲ್‌ ಕದ್ರಾ ಅಣೆಕಟ್ಟೆಗೆ ಬಾಗಿನ ಅರ್ಪಿಸಿದರು. ಕದ್ರಾ ಗ್ರಾಪಂ ಅಧ್ಯಕ್ಷೆ ಹನುಮವ್ವ, ಪಿಡಿಒ ರಾಜೇಶ ನಾಯ್ಕ, ತಹಸೀಲ್ದಾರ್‌ ನಿಶ್ಚಲ ನರೋನಾ ಇದ್ದರು.

ಮಳೆಯ ಪ್ರಮಾಣ

ಸೋಮವಾರ ಬೆಳಗಿನ ವರದಿಯಂತೆ ಅಂಕೋಲಾ- 115.3 ಮಿಮೀ, ಭಟ್ಕಳ-214.5, ಹಳಿಯಾಳ- 29, ಹೊನ್ನಾವರ 173.1, ಕಾರವಾರ-170.9, ಕುಮಟಾ-113.1, ಸಿದ್ದಾಪುರ-72.7, ಮುಂಡಗೋಡ-12, ಶಿರಸಿ-46, ಜೊಯಿಡಾ-84.2, ಯಲ್ಲಾಪುರ- 54.4, ಜೊಯಿಡಾ-42.3 ಮಿಮೀ ಮಳೆಯಾಗಿದೆ.