ಜಿಲ್ಲೆ

ಶಿರೋಳ-ಬದಾಮಿ ಸೇತುವೆ ಮೇಲೆ ನೀರು

ಬಸವರಾಜ ವೀರಪ್ಪ ಗರಗ

ಶಿರೋಳ: ನವಿಲುತೀರ್ಥ ಜಲಾಶಯ ಭರ್ತಿಯಾಗಿದ್ದು, ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಶಿರೋಳ ಗ್ರಾಮಸ್ಥರು ಪ್ರವಾಹ ಭೀತಿ ಅನುಭವಿಸುವಂತಾಗಿದೆ. ನೀರಿನಮಟ್ಟ ಹೆಚ್ಚಾಗಿದ್ದರಿಮದ ಗ್ರಾಮಗಳಲ್ಲಿ ಡಂಗುರ ಸಾರಿ ನದಿ ದಡದ ಪಂಪ್​ಸೆಟ್, ದನಕರುಗಳನ್ನು ಬಿಡದಂತೆ ಜಾಗೃತಿ ವಹಿಸಲು ಗ್ರಾಮ ಪಂಚಾಯಿತಿ, ತಾಲೂಕಾಡಳಿತ ಕ್ರಮ ವಹಿಸಲು ತಿಳಿಸಿದೆ.

ಮಲಪ್ರಭಾ ನದಿಗೆ ಪ್ರವಾಹ ಬಂದು ಶಿರೋಳ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಎಕರೆ ಗೋವಿನ ಜೋಳ, ಹೆಸರು, ಹತ್ತಿ, ಸೂರ್ಯಕಾಂತಿ, ಕಾಯಿಪಲ್ಲೆ, ಕಬ್ಬು,ಬಾಳೆ, ಪೇರಲ ತೋಟ ಹಾಳಾಗಿದ್ದು, ಬೆಳೆಗಳು ನಾಶವಾಗಿವೆ. ನದಿದಂಡೆಯ ಹತ್ತಿರದ ಹೊಲಗಳಲ್ಲಿ ನಿರ್ವಿುಸಲಾದ ಕೃಷಿ ಹೊಂಡಗಳು ಹಾಳಾಗಿವೆ.