ಜಿಲ್ಲೆ

ನೀರಮಾನ್ವಿಯಲ್ಲಿ ಚಿರತೆ ಪ್ರತ್ಯಕ್ಷ

Kopala - Desk - Eraveni

ಮಾನ್ವಿ: ತಾಲೂಕಿನ ನೀರಮಾನ್ವಿ ಗ್ರಾಮದ ಗುಡ್ಡದ ಬಳಿ ಶುಕ್ರವಾರ ಚಿರತೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಕಳೆದ ಮೂರ‌್ನಾಲ್ಕು ವರ್ಷಗಳ ಹಿಂದೆ ಚಿರತೆಗಳು ಕಾಣಿಸಿಕೊಂಡಿದ್ದವು. ಅರಣ್ಯ ಇಲಾಖೆ ಕಾರ್ಯಾಚರಣೆ ಮಾಡಿ ಮೂರು ಚಿರತೆಗಳನ್ನು ಹಿಡಿದು ಬೇರೆ ಕಡೆ ಬಿಟ್ಟು ಬಂದಿದ್ದರು.

ಮೂರ‌್ನಾಲ್ಕು ದಿನಗಳ ಹಿಂದೆ ಗುಡ್ಡದಲ್ಲಿ ಎರಡು ಚಿರತೆಗಳಿವೆ ಎಂದು ಪಕ್ಕದ ಹೊಲದಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ದನ ಕಾಯುವ ಹುಡುಗರು ಹೇಳಿದಾಗ ಯಾರೂ ನಂಬಿರಲಿಲ್ಲ. ಶುಕ್ರವಾರ ಕೆನಾಲ್ ರಸ್ತೆಯ ಸಿದ್ಧಾರೂಢ ಮಠದ ಹತ್ತಿರ ಚಿರತೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರು ಭಯಗೊಂಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಸೆರೆಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿ, ಮಾನ್ವಿ

ಪುರುಷೋತ್ತಮ

ನೀರಮಾನ್ವಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ಮಾಹಿತಿ ಬಂದಿದೆ. ಸ್ಥಳ ಪರಿಶೀಲನೆಗೆ ಸಿಬ್ಬಂದಿಯನ್ನು ಕಳಸಿಕೊಡಲಾಗುವುದು. ಜನ ಭಯಪಡದೆ ಧೈರ್ಯದಿಂದ ಇರಬೇಕು. ಚಿರತೆ ಹಿಡಿಯಲು ಕ್ರಮ ಕೈಗೊಳ್ಳಲಾಗುವುದು.